Bengaluru 28°C
Ad

ಕಂದಕಕ್ಕೆ ಉರುಳಿದ ಬಸ್, ನಾಲ್ವರು ಸಾವು, 40ಕ್ಕೂ ಅಧಿಕ ಮಂದಿಗೆ ಗಾಯ

ಅಮರಾವತಿ ಜಿಲ್ಲೆಯಲ್ಲಿ ಬಸ್  60-70 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 50-55 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ.

ಮಹಾರಾಷ್ಟ್ರ:  ಅಮರಾವತಿ ಜಿಲ್ಲೆಯಲ್ಲಿ ಬಸ್  60-70 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 50-55 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ.

ಸ್ಥಳೀಯ ನಿವಾಸಿಗಳು, ಚಿಕಲ್ದಾರ ಪೊಲೀಸರ ನೆರವಿನೊಂದಿಗೆ ತಕ್ಷಣ ಗಾಯಾಳುಗಳನ್ನು ಅಮರಾವತಿ ಆಸ್ಪತ್ರೆಗೆ ಕಳುಹಿಸಲಾಯಿತು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ತ್ವರಿತಗತಿಯಲ್ಲಿ ಸಾಗಿದೆ, ಆದರೆ ಗಂಭೀರ ಗಾಯಾಳುಗಳ ಸಂಖ್ಯೆ ಹೆಚ್ಚಿದ್ದು ಕಳವಳವನ್ನುಂಟುಮಾಡಿದೆ.

ಓರ್ವ ಅಪ್ರಾಪ್ತ ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಿಳೆಯರನ್ನು 65 ವರ್ಷದ ಇಂದು ಸಮಾಧಾನ್ ಗಂಟ್ರೆ ಮತ್ತು 30 ವರ್ಷದ ಲಲಿತಾ ಚಿಮೋಟೆ ಎಂದು ಗುರುತಿಸಲಾಗಿದೆ.

Ad
Ad
Nk Channel Final 21 09 2023