ಮಹಾರಾಷ್ಟ್ರ : ಯಾತ್ರಿಕರಿದ್ದ ಐಷಾರಾಮಿ ಬಸ್ ಒಂದು ಕಣಿವೆಗೆ ಉರುಳಿ ಬಿದ್ದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ ಸಪುತಾರಾ ಗಿರಿಧಾಮದ ಬಳಿ ಉರುಳಿಬಿದ್ದ ಬಸ್, ಮಧ್ಯಪ್ರದೇಶದಿಂದ ಗುಜರಾತ್ ನ ನಾಶಿಕ್ ಗೆ ಪ್ರಯಾಣಿಸುತ್ತಿತ್ತು. ಸ್ಥಳೀಯ ರಕ್ಷಣಾ ಪಡೆಗಳು, ಆಂಬುಲೆನ್ಸ್ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತಾಗಿದ್ದಾರೆ. ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಸಪುತಾರಾ ಆಸ್ಪತ್ರೆಗೆ ರವಾನಿಸಲಾಗಿದೆ.