Ad

ಶಿಮ್ಲಾದಲ್ಲಿ ಬಸ್ ಅಪಘಾತ: ನಾಲ್ಕು ಮಂದಿ ಮೃತ್ಯು, ಮೂವರು ಗಂಭೀರ

ಬಸ್ ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಮೂರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಮ್ಲಾದಲ್ಲಿ ನಡೆದಿದೆ. ವಿವರಗಳ ಪ್ರಕಾರ, ಜುಬ್ಬಲ್‌ನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಬಸ್ ಚಾಲಕ, ಕಂಡಕ್ಟರ್, ಮಹಿಳೆ ಮತ್ತು ನೇಪಾಳಿ ಪ್ರಜೆ ಸೇರಿದ್ದಾರೆ.

ಹಿಮಾಚಲ ಪ್ರದೇಶ: ಬಸ್ ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಮೂರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಮ್ಲಾದಲ್ಲಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಬಸ್ ಚಾಲಕ, ಕಂಡಕ್ಟರ್, ಮಹಿಳೆ ಮತ್ತು ನೇಪಾಳಿ ಪ್ರಜೆ ಸೇರಿದ್ದಾರೆ.

Ad
300x250 2

ಅಪಘಾತವಾದ ಕೂಡಲೇ ಸ್ಥಳಕ್ಕಾಗಮಿಸಿದ ಜುಬ್ಬಲ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್  ರಾಜೀವ್ ಸಂಖಾಯನ್, ಘಟನೆಯ ಸಮಯದಲ್ಲಿ ಬಸ್‌ನಲ್ಲಿ 7 ಪ್ರಯಾಣಿಕರಿದ್ದರು.ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಗಾಯಗೊಂಡಿರುವ ಇತರ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‌ಡಿಎಂ ತಿಳಿಸಿದೆ. ಬಸ್ಸಿನಲ್ಲಿದ್ದ ಇತರ ಸಂಭಾವ್ಯ ಪ್ರಯಾಣಿಕರಿಗಾಗಿ ಶೋಧ ನಡೆಸಲಾಗುತ್ತಿದೆ. ಅಪಘಾತದ ಹಿಂದಿನ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ.

Ad
Ad
Nk Channel Final 21 09 2023
Ad