Bengaluru 19°C

ರಾಷ್ಟ್ರ ರಾಜಧಾನಿ ದೆಹಲಿಯ 40 ಶಾಲೆಗಳಿಗೆ ಬಾಂಬ್‌ ಬೆದರಿಕೆ!

ರಾಷ್ಟ್ರ ರಾಜಧಾನಿ ದೆಹಲಿಯ 40 ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿದ್ದು, ಕಿಡಿಗೇಡಿಗಳು 30 ಸಾವಿರ ಅಮೆರಿಕನ್‌ ಡಾಲರ್‌ (₹25,40,719) ಹಣಕ್ಕೆ ಬೇಡಿಯಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ 40 ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿದ್ದು, ಕಿಡಿಗೇಡಿಗಳು 30 ಸಾವಿರ ಅಮೆರಿಕನ್‌ ಡಾಲರ್‌ (₹25,40,719) ಹಣಕ್ಕೆ ಬೇಡಿಯಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಸೋಮವಾರ ಬೆಳಿಗ್ಗೆ ಆರಂಭದಲ್ಲಿ ಎರಡು ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಬಳಿಕ 40 ಶಾಲೆಗಳಿಗೆ ಇ–ಮೇಲ್‌ ಮೂಲಕ ಬೆದರಿಕೆ ಬಂದಿದೆ ಎಂದು ತಿಳಿಯಿತು. ಶಾಲೆಗಳಿಗೆ ರಜೆ ನೀಡಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇ–ಮೇಲ್‌ನಲ್ಲಿ ‘ಶಾಲೆಯ ಕಟ್ಟಡದೊಳಗೆ ಅನೇಕ ಬಾಂಬ್‌ಗಳನ್ನು ಇರಿಸಲಾಗಿದೆ. ಎಲ್ಲವನ್ನೂ ಮರೆಮಾಚಿ ಇಡಲಾಗಿದೆ. ಈ ಬಾಂಬ್‌ಗಳು ಕಟ್ಟಡಕ್ಕೆ ಹೆಚ್ಚು ಹಾನಿ ಮಾಡುವುದಿಲ್ಲ, ಆದರೆ ಜನರನ್ನು ಗಾಯಗೊಳಿಸಲಿದೆ. 30 ಸಾವಿರ ಡಾಲರ್ ಹಣ ನೀಡದಿದ್ದರೆ, ನೀವೆಲ್ಲರೂ ಕೈಕಾಲು ಕಳೆದುಕೊಳ್ಳಬೇಕಾಗುತ್ತದೆ. =E2=80=9CKNR=E2=80=9D ಈ ದಾಳಿಯ ಹಿಂದೆ ಇದೆ’ ಎಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.


ಅಗ್ನಿಶಾಮಕ ದಳದ ಅಧಿಕಾರಿಗಳು, ಶ್ವಾನ ದಳ, ಬಾಂಬ್ ಪತ್ತೆ ದಳ, ಸ್ಥಳೀಯ ಪೊಲೀಸರು ಶಾಲೆಗಳಿಗೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಸದ್ಯಕ್ಕೆ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Nk Channel Final 21 09 2023