ದೆಹಲಿ: ಶುಕ್ರವಾರ ರಾತ್ರಿ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ದೆಹಲಿಯ ಉತ್ತಮ ನಗರದ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸುಳ್ಳು ಬಾಂಬ್ ಬೆದರಿಕೆ ಹಾಕಿದವರ ಪಟ್ಟಿಯಲ್ಲಿ ಅ.16 ರಂದು ಮುಂಬೈನ 17 ವರ್ಷದ ಬಾಲಕನೊಬ್ಬನನ್ನು ಬಂಧಿಸಲಾಗಿತ್ತು. ಇದೀಗ ಹುಸಿ ಕರೆ ನೀಡುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಶುಭಂ ಉಪಧ್ಯಾಯನ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಉತ್ತಮ ನಗರದ ರಾಜಪುರಿ ಪ್ರದೇಶದಲ್ಲಿರುವ ಆತನ ಮನೆಯಿಂದಲೆ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಪೋಲಿಸರ ವರದಿಯ ಪ್ರಕಾರ, ಆರೋಪಿ ಶುಭಂ ತನ್ನ ದ್ವಿತೀಯ ಪಿಯುಸಿಯ ಬಳಿಕ ಕಾಲೇಜನ್ನು ತೊರೆದಿದ್ದು, ಎಲ್ಲೂ ಕೆಲಸ ಸಿಗದ ಹಿನ್ನಲೆ ನಿರುದ್ಯೋಗಿಯಾಗಿದ್ದ. ಹೀಗಾಗಿ ಇಂತಹ ಹುಚ್ಚಾಟ ಕೆಲಸವನ್ನ ಮಾಡುತ್ತಿದ್ದ ಎಂದು ಅಧಿಕಾರಿಯೊಬ್ಬರು ಹೇಳಿದರು.
ಶುಭಂ ತನ್ನ ಸೋಶಿಯಲ್ ಮೀಡಿಯಾದಲ್ಲಿ ಎರಡು ಬೆದರಿಕೆ ಪೋಸ್ಟ್ ಗಳನ್ನು ಮಾಡಿದ್ದು, ದೆಹಲಿಗೆ ಹೋಗುವ ವಿಮಾನದಲ್ಲಿ ಬಾಂಬ್ ಇದೆ. ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆಯ ಸಂದೇಶವನ್ನು ಪೋಸ್ಟ್ ಮಾಡಿದ್ದ ಎಂದು ವರದಿಯಾಗಿದೆ. ಸದ್ಯ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆರೋಪಿ ಶುಭಂ ವಿರುದ್ದ ಕಾನೂನುಬಾಹಿರ ಕಾಯಿದೆಗಳ ನಿಗ್ರಹ ಮತ್ತು BNS ಅಡಿಯಲ್ಲಿ ಕ್ರಿಮಿನಲ್ ಬೆದರಿಕೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.