ಮಣಿಪುರ: ಇಂಫಾಲ್ ಪೂರ್ವದ ಕೇಸ್ತ್ರಿಗಾವೊ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೊಬ್ಬರ ನಿವಾಸದಲ್ಲಿ ಶನಿವಾರ ರಾತ್ರಿ 10:30 ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಶಾಸಕ ನಹಕ್‌ಪಂ ಇಂದ್ರಜಿತ್ ಅವರ ಮುಖ್ಯ ಗೇಟ್‌ನಲ್ಲಿ ಹ್ಯಾಂಡ್ ಗ್ರೆನೇಡ್ ಎಂದು ಶಂಕಿಸಲಾದ ಬಾಂಬ್ ಅನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಎಸೆದಿದ್ದು, ಅದು ಸ್ಫೋಟಗೊಂಡಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ದುಷ್ಕರ್ಮಿಗಳು ನಾಲ್ಕು ಚಕ್ರದ ವಾಹನದಲ್ಲಿ ಬಂದಿದ್ದರು. ಮಣಿಪುರ ಪೊಲೀಸರು, ಫೋರೆನ್ಸಿಕ್ಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ನಿನ್ನೆ ಮಣಿಪುರದ ಇಂಫಾಲ್ ಪೂರ್ವದ ಪೊರೊಂಪತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Breaking: A grenade blast outside former #BJP MLA NahakpamIndrajit Singh’s residence in Kshetrigao, #Manipur last night around 10:15 PM. No casualties reported. Investigation underway as authorities probe potential motives and threats received earlier. #ManipurViolence pic.twitter.com/tP6erR9Gqr
— Afrida Hussain (@afridahussai) August 18, 2024