Ad

ಗಂಗಾ ನದಿಯಲ್ಲಿ ರೈತರು ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆ : 6 ಮಂದಿ ನಾಪತ್ತೆ

ಗಂಗಾನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದ್ದು, 6 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಮುಳುಗಿದೆ. ಹನ್ನೊಂದು ಪ್ರಯಾಣಿಕರು ಈಜಿ ದಡ ತಲುಪಿದ್ದಾರೆ, ಉಳಿದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

300x250 2

ಘಟನೆ ಸಂಭವಿಸಿದಾಗ ಬೋಟ್ ಬರ್ಹ್‌ನ ಉಮಾನಾಥ್ ಘಾಟ್‌ನಿಂದ ಡಿಯಾರಾಗೆ ಪ್ರಯಾಣಿಸುತ್ತಿದ್ದು, ಪ್ರಸ್ತುತ ಬೋಟ್‌ನಲ್ಲಿರುವ ಉಳಿದ ಆರು ಪ್ರಯಾಣಿಕರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 19 ರಂದು ಬೆಳಿಗ್ಗೆ 7-8 ರ ಸುಮಾರಿಗೆ ಕೆಲವು ರೈತರು ತಮ್ಮ ತರಕಾರಿಗಳನ್ನು ದೋಣಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

Ad
Ad
Nk Channel Final 21 09 2023
Ad