Ad

ಸ್ಫೋಟಕ ತಯಾರಿಕಾ ಘಟಕದಲ್ಲಿ ಸ್ಫೋಟ : 5 ಮಂದಿ ಕಾರ್ಮಿಕರು ಸಾವು

ಮಹಾರಾಷ್ಟ್ರದನಾಗ್ಪುರದಲ್ಲಿರುವ ಸ್ಫೋಟಕ ತಯಾರಿಕಾ ಘಟಕದಲ್ಲಿ ಸ್ಫೋಟಕ ಸಿಡಿದು 5 ಮಂದಿ ಕಾರ್ಮಿಕರು ಸಾವನಪ್ಪಿದ್ದು 5 ಮಂದಿ ಗಾಯಗೊಂಡಿದ್ದಾರೆ.

ನಾಗ್ಪುರ: ಮಹಾರಾಷ್ಟ್ರದನಾಗ್ಪುರದಲ್ಲಿರುವ ಸ್ಫೋಟಕ ತಯಾರಿಕಾ ಘಟಕದಲ್ಲಿ ಸ್ಫೋಟಕ ಸಿಡಿದು 5 ಮಂದಿ ಕಾರ್ಮಿಕರು ಸಾವನಪ್ಪಿದ್ದು 5 ಮಂದಿ ಗಾಯಗೊಂಡಿದ್ದಾರೆ.ಸ್ಥಳೀಯ ಪೊಲೀಸರ ಪ್ರಕಾರ, ಅವರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಹಿಂಗ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಧಮ್ನಾ ಗ್ರಾಮದ ಚಾಮುಂಡಿ ಎಕ್ಸ್‌ಪ್ಲೋಸಿವ್ ಪ್ರೈವೇಟ್ ಲಿಮಿಟೆಡ್​ನಲ್ಲಿ ಈ ಘಟನೆ ನಡೆದಿದೆ.

Ad
300x250 2

ಘಟನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾರ್ಮಿಕರು ಸ್ಫೋಟಕಗಳನ್ನು ಪ್ಯಾಕ್ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಎನ್‌ಸಿಪಿ-ಎಸ್‌ಸಿಪಿ ನಾಯಕ ಅನಿಲ್ ದೇಶಮುಖ್ ಕೂಡ ಘಟನಾ ಸ್ಥಳ ಆಗಮಿಸಿದ್ದಾರೆ.ಘಟಕದ ವ್ಯವಸ್ಥಾಪಕ ಮತ್ತು ಮಾಲೀಕರು ತಲೆಮರೆಸಿಕೊಂಡಿದ್ದಾರೆ ಎಂದು ಎನ್‌ಸಿಪಿ-ಎಸ್‌ಸಿಪಿ ನಾಯಕ ಅನಿಲ್ ದೇಶಮುಖ್ ಹೇಳಿದ್ದಾರೆ

 

Ad
Ad
Nk Channel Final 21 09 2023
Ad