Bengaluru 22°C
Ad

ಪಾಟ್ನಾದ ಬಿಜೆಪಿ ನಾಯಕನನ್ನ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು

ಗುಂಡು ಹಾರಿಸಿ ಬಿಜೆಪಿ ನಾಯಕನ ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾದಲ್ಲಿ ಸೋಮವಾರ ಮುಂಜಾನೆ ದುಷ್ಕರ್ಮಿಗಳು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.ಪಾಟ್ನಾ ನಗರದ ಮಂಗಲ್ ತಲಾಬ್ ಬಳಿಯ ಮನೋಜ್ ಕಮಾಲಿಯಾ ಗೇಟ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬಿಜೆಪಿ ಮುಖಂಡ ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ ಶರ್ಮಾ ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪಾಟ್ನಾ :   ಗುಂಡು ಹಾರಿಸಿ ಬಿಜೆಪಿ ನಾಯಕನ ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾದಲ್ಲಿ ಸೋಮವಾರ ಮುಂಜಾನೆ ದುಷ್ಕರ್ಮಿಗಳು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.ಪಾಟ್ನಾ ನಗರದ ಮಂಗಲ್ ತಲಾಬ್ ಬಳಿಯ ಮನೋಜ್ ಕಮಾಲಿಯಾ ಗೇಟ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬಿಜೆಪಿ ಮುಖಂಡ ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ ಶರ್ಮಾ ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಶ್ಯಾಮ್ ಸುಂದರ್ ಮನೋಜ್ ಕಮಾಲಿಯಾ ಗೇಟ್ ಬಳಿ ಬಂದಿದ್ದಾಗ ಕ್ರಿಮಿನಲ್‌ಗಳು ಗುಂಡು ಹಾರಿಸಿದ್ದಾರೆ. ಶ್ಯಾಮ್ ಸುಂದರ್ ಬಿಜೆಪಿಯಿಂದ ಪಾಟ್ನಾ ಸಿಟಿ ಚೌಕ್‌ನ ಮಾಜಿ ಮುನ್ಸಿಪಲ್ ಬೋರ್ಡ್ ಅಧ್ಯಕ್ಷರಾಗಿದ್ದರು.

Ad
Ad
Nk Channel Final 21 09 2023