Bengaluru 28°C
Ad

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಭ್ಯರ್ಥಿ ಮುಷ್ತಾಕ್ ಅಹ್ಮದ್ ಬುಖಾರಿ ನಿಧನ

ಜಮ್ಮು ಮತ್ತು ಕಾಶ್ಮೀರದ ಸುರನ್‌ಕೋಟೆ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಚಿವ ಸೈಯದ್ ಮುಷ್ತಾಕ್ ಅಹ್ಮದ್ ಬುಖಾರಿ (75) ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸುರನ್‌ಕೋಟೆ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಚಿವ ಸೈಯದ್ ಮುಷ್ತಾಕ್ ಅಹ್ಮದ್ ಬುಖಾರಿ (75) ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸೈಯದ್ ಮುಷ್ತಾಕ್ ಅಹ್ಮದ್ ಬುಖಾರಿ ಅವರು ಇಂದು ಪೂಂಚ್ ಜಿಲ್ಲೆಯ ಪಾಮ್ರೋಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಬುಖಾರಿ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಬುಖಾರಿ ಅವರು ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು ಮತ್ತು ಬೆಳಿಗ್ಗೆ 7 ಗಂಟೆಗೆ ಹೃದಯಾಘಾತವಾಗಿದೆ. ಅವರ ನಿಧನದಿಂದ ಪಕ್ಷ ಮತ್ತು ಸಮುದಾಯಕ್ಕೆ ಅಪಾರ ನಷ್ಟವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

 

Ad
Ad
Nk Channel Final 21 09 2023