ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ಗುರುವಾರ (ಆಗಸ್ಟ್ 8) ವಿಧೇಯಕ ಮಂಡಿಸಲಿದೆ. ಮಂಗಳವಾರ (ಆಗಸ್ಟ್ 6) ರಾತ್ರಿಯೇ ವಿಧೇಯಕದ ಪ್ರತಿಯನ್ನು ಲೋಕಸಭೆ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದನ್ನು ಈಗಾಗಲೇ ಎಐಎಂಐಎಂ ಮುಖ್ಯಸ್ಥ ವಿರೋಧಿಸಿದ್ದಾರೆ.
1995ರ ವಕ್ಫ್ ಕಾಯ್ದೆಯ ಸೆಕ್ಷನ್ 40ಕ್ಕೆ ತಿದ್ದುಪಡಿ ತಂದು ಹಲವು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದನ್ನು ವಕ್ಫ್ ಕಾಯ್ದೆ ಎನ್ನುವ ಬದಲು ಯುನಿಫೈಡ್ ವಕ್ಫ್ ಮ್ಯಾನೇಜ್‌ಮೆಂಟ್, ಎಫಿಶಿಯೆನ್ಸಿ & ಡೆವಲಪ್‌ಮೆಂಟ್ ಆಕ್ಟ್ ಎಂಬುದಾಗಿ ಮರು ನಾಮಕರಣ ಮಾಡಲಾಗುತ್ತದೆ. ಇನ್ನು, 1923ರಲ್ಲಿ ಜಾರಿಗೆ ತಂದ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಲು ಕೂಡ ಕೇಂದ್ರ ಸರ್ಕಾರವು ಮತ್ತೊಂದು ವಿಧೇಯಕ ಮಂಡನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
Ad