Bengaluru 23°C
Ad

ಕಚೇರಿಯಲ್ಲೇ ಪ್ರಾಣಬಿಟ್ಟ ಬ್ಯಾಂಕ್ ಉದ್ಯೋಗಿ : ಒತ್ತಡವೇ ಕಾರಣ ಎಂದ ಸಹೋದ್ಯೋಗಿ

ಕೆಲಸದ ಒತ್ತಡದಿಂದ ಕುರ್ಚಿ ಮೇಲೆ ಕುಳಿತೇ ಬ್ಯಾಂಕ್​ನ ಮಹಿಳಾ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಆಕೆಯ ಸಹೋದ್ಯೋಗಿಯೊಬ್ಬರು ದೈನಿಕ್ ಭಾಸ್ಕರ್​ಗೆ ನೀಡಿದ ಹೇಳಿಕೆಯಲ್ಲಿ ಆಕೆ ಕೆಲಸದ ಒತ್ತಡದಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಲಕ್ನೋ ;  ಕೆಲಸದ ಒತ್ತಡದಿಂದ ಕುರ್ಚಿ ಮೇಲೆ ಕುಳಿತೇ ಬ್ಯಾಂಕ್​ನ ಮಹಿಳಾ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಆಕೆಯ ಸಹೋದ್ಯೋಗಿಯೊಬ್ಬರು ದೈನಿಕ್ ಭಾಸ್ಕರ್​ಗೆ ನೀಡಿದ ಹೇಳಿಕೆಯಲ್ಲಿ ಆಕೆ ಕೆಲಸದ ಒತ್ತಡದಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಮಹಿಳೆಯನ್ನು ಸದಾಫ್ ಫಾತಿಮಾ ಎಂದು ಗುರುತಿಸಲಾಗಿದ್ದು, ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗೋಮ್ಟಿನಗರದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಬೂತಿ ಖಂಡ್ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೆಪ್ಟೆಂಬರ್ 24 ರಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕುರ್ಚಿಯಿಂದ ಕೆಳಗೆ ಬಿದ್ದಿದ್ದರು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

Ad
Ad
Nk Channel Final 21 09 2023