ನವದೆಹಲಿ: ಪ್ಯಾರಿಸ್ನಿಂದ ಇಂದು ನವದೆಹಲಿಗೆ ಆಗಮಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ಅವರಿಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಗಿತ್ತು. ಇದೇ ವೇಳೆ ಕುಸ್ತಿಪಟು ಬಜರಂಗ್ ಪೂನಿಯ ಮಾಧ್ಯಮದವರನ್ನು ಸಂಬಾಳಿಸುವ ಫಜೀತಿಯಲ್ಲಿ ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ಕಾಲಿಟ್ಟಿ ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ವಿನೇಶ್ ಅವರನ್ನು ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ನೆರದಿದ್ದ ಪತ್ರಕರ್ತರು ವಿನೇಶ್ ಅವರ ಬೈಟ್ಸ್ಗಳಿಗೆ ಮೈಕ್ ಹಿಡಿದು ಕಾರಿಗೆ ಸುತ್ತುವರಿದಿದ್ದರು. ಇವರನ್ನು ಸಂಬಾಳಿಸುವ ಭರದಲ್ಲಿ ಕಾರ್‌ನ ಬಾನೆಟ್ ಮೇಲೆ ಹಾಕಲಾಗಿದ್ದ ತ್ರಿವರ್ಣ ಧ್ವಜದ ಪೋಸ್ಟರ್ ಇರುವ ಬ್ಯಾನರ್ ಮೇಲೆ ಬಜರಂಗ್ ಪೂನಿಯಾ ನಿಂತಿದ್ದರು. ಸದ್ಯ ಈ ಫೋಟೊ ಮತ್ತು ವಿಡಿಯೊ ವೈರಲ್ ಆಗಿದ್ದು, ರಾಷ್ಟ್ರ ಧ್ವಜದ ಮೇಲೆ ಕಾಲಿಡಬಾರದು ಎಂಬ ಕಿಂಚಿತ್ತು ಬುದ್ಧಿ ಕೂಡ ನಿಮಗಿಲ್ಲವೇ ಎಂದು ನೆಟ್ಟಿಗರು ಬಜರಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
So @BajrangPunia standing on ‘Tiranga’
Fun fact you can’t criticise him because he has represented India in olympic games so he has freedom to do all this. pic.twitter.com/FNDniKuyXI
— BALA (@erbmjha) August 17, 2024