ನವದೆಹಲಿ: ಬ್ಯಾಟರಿ ಸ್ಲಾಟ್‌ನಲ್ಲಿ ಚಿನ್ನ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 200 ಗ್ರಾಂ ತೂಕದ ಎರಡು ಚಿನ್ನದ ಬಾರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಯಾಣಿಕರು ದಮ್ಮಾಮ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು.
ದೆಹಲಿಯ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ನಂತರ ಅಧಿಕಾರಿಗಳು ಬ್ಯಾಟರಿ ಸ್ಲಾಟ್‌ನಲ್ಲಿ ಬಚ್ಚಿಟ್ಟಿದ್ದ ಅಂದಾಜು 200 ಗ್ರಾಂ ತೂಕದ ಎರಡು ಚಿನ್ನದ ಬಾರ್‌ಗಳನ್ನು ಪತ್ತೆ ಮಾಡಿದರು. ಪ್ರಯಾಣಿಕರ ಮೊಬೈಲ್ ಫೋನ್, ಚಿನ್ನದ ಬಾರ್‌ಗಳ ಮೂಲ ಹಾಗೂ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದರ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Ad