ಬೆಂಗಳೂರು: ಅಯೋದ್ಯ ರಾಮಮಂದಿರದ ಶ್ರೀರಾಮ ವಿಗ್ರಹದ ರೂವಾರಿ ಹೆಮ್ಮೆಯ ಕನ್ನಡಿಗ ಖ್ಯಾತ ಶಿಲ್ಪಿಅರುಣ್ ಯೋಗಿರಾಜ್ ಮೇರಿಕಾದ ಸಿಯಾಟಲ್ ನಗರದಲ್ಲಿನ ಸಹ್ಯಾದ್ರಿ ಕನ್ನಡ ಸಂಘ ನೀಡುವ, ಪ್ರತಿಷ್ಠಿತ ವಿಶ್ವ ಶ್ರೇಷ್ಠ ಕನ್ನಡಿಗ 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಿಯಾಟಲ್ ನಗರದಲ್ಲಿ ಇಂದು ನಡೆದ ಸಹ್ಯಾದ್ರಿ ಕನ್ನಡ ಸಂಘದ ಪದಾಧಿಕಾರಿಗಳ ಸಭೆಯಲ್ಲಿ, ಸಂಘದ ಚೇರ್ಮನ್ ಮನು ಗೊರೂರು ಈ ವಿಷಯವನ್ನು ಪ್ರಕಟಿಸಿದರು ಹಾಗೂ ಸೆಪ್ಟೆಂಬರ್ 7ರಂದು ಸಿಯಾಟಲ್‌ನ ಬೆನಾರೋಯಾ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಡಾ. ಅರುಣ್ ಯೋಗಿರಾಜ್ ಅವರು ಶ್ರೀರಾಮ ವಿಗ್ರಹವನ್ನು ಮಾತ್ರವಲ್ಲದೆ ಹಲವಾರು ಶಿಲ್ಪ ಕಲಾಕೃತಿಗಳನ್ನು ರಚಿಸಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗಿತ್ತು.
Ad