ಕಾಸರಗೋಡು : ಶಿರೂರಿನಲ್ಲಿ ಭೂಕುಸಿತಕ್ಕೆ ಸಿಲುಕಿ ನದಿಪಾಲಾಗಿ 72 ದಿನಗಳ ಬಳಿಕ ಪತ್ತೆಯಾದ ಲಾರಿ ಚಾಲಕ ಕೋಝಿಕ್ಕೋಡ್ ಕನ್ನಾಡಿಕ್ಕಾಲ್ ನ ಪಾರ್ಥಿವ ಶರೀರ ಅಂಬ್ಯುಲೆನ್ಸ್ ಮೂಲಕ ಕಾಸರಗೋಡಿಗೆ ತಲಪಿದಾಗ ಜಿಲ್ಲಾಡಳಿತ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ಮೊದಲಾದವರು ಪುಷ್ಪ ಚಕ್ರ ಅರ್ಪಿಸಿದರು.
ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ತಡರಾತ್ರಿ ಯಾದಾರೂ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಅಂಬ್ಯುಲೆನ್ಸ್ ನಲ್ಲಿದ್ದ ಅರ್ಜುನ್ ರ ಸಹೋದರಿ ಪತಿ ಜಿತಿನ್ ಸಹೋದರ ಅಭಿಜಿತ್ ರವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಾಂತ್ವನ ಪಡಿಸಿದರು. ಮಂಜೇಶ್ವರ ಶಾಸಕ ಎ . ಕೆ . ಎಂ ಅಶ್ರಫ್ , ಕಾರವಾರ ಶಾಸಕ ಸತೀಶ್ ಸೈಲ್ ರವರು ಜೊತೆಗಿದ್ದಾರೆ. ಅರ್ಜುನ್ ಪ್ರತಿಬಾರಿ ಲಾರಿಕೊಂಡೊಯ್ಯುವ ದಾರಿಯಾಗಿಯೇ ಅಂಬ್ಯುಲೆನ್ಸ್ ತೆರಳುತ್ತಿದೆ. ಬಳಿಕ ಅಂಬ್ಯುಲೆನ್ಸ್ ಕೋಝಿಕ್ಕೋಡ್ ಗೆ ಪ್ರಯಾಣ ಬೆಳೆಸಿತು. ಇಂದು ಬೆಳಿಗ್ಗೆ 8. 30 ರ ಸುಮಾರಿಗೆ ಅರ್ಜುನ್ ರ ಮೃತದೇಹ ಮನೆಗೆ ತಲಪಿಸಲಾಯಿತು ಶೋಧದ ಬಳಿಕ 72 ದಿನಗಳ ಬಳಿಕ ಗಂಗಾವಳಿ ನದಿಯ ಆಳಭಾಗದಲ್ಲಿ ಲಾರಿಯೊಂದರ ಒಳಗೆ ಕೊಳೆ ತ ಸ್ಥಿತಿಯಲ್ಲಿ ಅರ್ಜುನ್‌ರ ವರ ಮೃತದೇಹ ಲಭಿಸಿತ್ತು .