ನವದೆಹಲಿ: ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕು ಮೊದಲೇ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ ನೀಡಲು ಮುಂದಾಗಿದೆ. ಇದೇ ಅಕ್ಟೋಬರ್ ತಿಂಗಳಿನಿಂದಲೇ ನೌಕರರ ವೇತನ ಹೆಚ್ಚಳ ಪ್ರಕಟಿಸುವ ಸಾಧ್ಯತೆ ಇದೆ. ಈ ಮೂಲಕ ದುಬಾರಿ ದುನಿಯಾದಲ್ಲಿ, ಹಣದುಬ್ಬರ ತಗ್ಗಿಸಲು ಸರ್ಕಾರ ನೌಕರರ ಕೈ ಹಿಡಿಯಲಿದೆ.
ಹಾಗಾದರೆ ತುಟ್ಟಿಭತ್ಯೆ ಘೋಷಣೆ ಬಳಿಕ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ, ಮಾಸಿಕ ಮತ್ತು ವಾರ್ಷಿಕವಾಗಿ ನೌಕರರು ಪಡೆಯಬಹುದಾದ ವೇತನದ ವಿವರ ಇಲ್ಲಿದೆ. 7ನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಳ ಘೋಷಣೆಗೆ ದಿನಗಣನೇ ಆರಂಭವಾಗಿದೆ. ಮೂಲಗಳ ಪ್ರಕಾರ ಇನ್ನೊಂದು ತಿಂಗಳಲ್ಲಿ ಸೆಪ್ಟಂಬರ್ ಆರಂಭದಲ್ಲಿ ಇಲ್ಲವೇ ಅಂತ್ಯದಲ್ಲಿ ವೇತನ ಹೆಚ್ಚಳ ಘೋಷಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರಿ ನೌಕರರು ಕಳೆದ ಮಾರ್ಚ್ ತಿಂಗಳಲ್ಲಿ ಜನವರಿಯ ತುಟ್ಟಿಭತ್ಯೆ , ತುಟ್ಟಿ ಪರಿಹಾರ ಶೇಕಡಾ 4ರಷ್ಟು ಹೆಚ್ಚಳ ಸಹಿತ ವೇತನ ಪಡೆದಿದ್ದಾರೆ. ಇದೀಗ ಜುಲೈ ತಿಂಗಳ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಅಕ್ಟೋಬರ್‌ನಲ್ಲಿ ಪಡೆಯಲಿದ್ದಾರೆ. ಈ ಮೂಲಕ ದೀಪಾವಳಿಗೆ ಹಬ್ಬಕ್ಕು ಮೊದಲೇ ಕೇಂದ್ರ ಸರ್ಕಾರ ಗಿಫ್ಟ್ ನೀಡಲಿದೆ.