Bengaluru 20°C
Ad

ಅಂಡಮಾನ್ ನಿಕೋಬಾರ್ ರಾಜಧಾನಿಯ ಹೆಸರು ಬದಲಿಸಿದ ಕೇಂದ್ರ ಸರ್ಕಾರ

ಮೋದಿ ಸರ್ಕಾರ ಈಗ ಅಂಡಮಾನ್ ನಿಕೋಬಾರ್ ರಾಜಧಾನಿಯಾಗಿರುವ ಪೋರ್ಟ್​ಬ್ಲೇರ್​ ಹೆಸರನ್ನು ಕೂಡ ಮರುನಾಮಕರಣ ಮಾಡುತ್ತಿದೆ.

ನವದೆಹಲಿ: ಮೋದಿ ಸರ್ಕಾರ ಈಗ ಅಂಡಮಾನ್ ನಿಕೋಬಾರ್ ರಾಜಧಾನಿಯಾಗಿರುವ ಪೋರ್ಟ್​ಬ್ಲೇರ್​ ಹೆಸರನ್ನು ಕೂಡ ಮರುನಾಮಕರಣ ಮಾಡುತ್ತಿದೆ.

ಅಮಿತ್ ಶಾ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ಪ್ರೇರಣೆಯಿಂದ ಹಾಗೂ ವಸಹಾತುಶಾಹಿ ಸಂಕೋಲೆಗಳಿಂದ ಮುಕ್ತವಾಗುವ ಉದ್ದೇಶದಿಂದ ಇಂದು ನಾವು ಅಂಡಮಾನ್ ನಿಕೋಬಾರ್ ರಾಜಧಾನಿ ಪೋರ್ಟ್​ಬ್ಲೇರ್​ನ್ನು ಶ್ರೀವಿಜಯಪುರಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ.

ಈ ಹಿಂದೆ ಇದ್ದಿದ್ದ ಹೆಸರು ವಸಹಾತುಶಾಹಿಯ ಗುರುತಾಗಿತ್ತು. ಶ್ರೀವಿಜಯಪುರಂ ಸ್ವಾತಂತ್ರ್ಯ ಸಂಗ್ರಾಮದ ಹಲವು ಗೆಲುವುಗಳ ಗುರುತು ಹಾಗೂ ಅಂಡಮಾನ್ ನಿಕೋಬಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಪ್ರಮುಖ ಪಾತ್ರವಹಿಸಿದೆ. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಭಾರತದ ಇತಿಹಾಸದಲ್ಲಿ ಅಂಡಮಾನ್ ನಿಕೋಬಾರ್​ ಸಾಟಿಯಿಲ್ಲದ ಸ್ಥಾನ ಪಡೆದಿದೆ. ಈ ಹಿಂದೆ ಚೋಳ ಸಾಮ್ರಾಜ್ಯದ ನೌಕಾನೆಲೆಯಾಗಿ ಸೇವೆ ಸಲ್ಲಿಸಿದ್ದ ಈ ನೆಲ ಈಗ ನಮಗೆ ಅಭಿವೃದ್ಧಿಯ ಆಶಾಭಾವದ ನೆಲೆಯಾಗಿ ನಿಂತಿದೆ.

 

Ad
Ad
Nk Channel Final 21 09 2023