Bengaluru 22°C
Ad

ಮೆಟ್ರೋ ಬರುವಾಗ ಹಳಿಗೆ ಹಾರಿ ವೃದ್ಧ ಆತ್ಮಹತ್ಯೆ; ರೈಲು ಸಂಚಾರ ಸ್ಥಗಿತ

Metro

ವದೆಹಲಿ: ಮೆಟ್ರೊ ನಿಲ್ದಾಣಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಾರ್ವಜನಿಕರು ರೈಲ್ವೇ ಹಳಿಗಳ ಮೇಲೆ ಹಾರುವ ಪ್ರಕರಣಗಳು ಕಡಿಮೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದ ಕೆಂಪು ಮಾರ್ಗದ ಕಾಶ್ಮೀರಿ ಗೇಟ್ ನಿಲ್ದಾಣದಲ್ಲಿ ಹಳಿಗೆ ಜಾರಿ 60 ವರ್ಷದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ad
300x250 2

ದುರದೃಷ್ಟವಶಾತ್ ಮೆಟ್ರೋ ರೈಲಿಗೆ ಸಿಲುಕಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ದೆಹಲಿಯ ಚವರಿ ಬಜಾರ್‌ ನಿವಾಸಿ ಸುನೀಲ್ ಗುಪ್ತಾ ಎಂದು ಗುರುತಿಸಲಾಗಿದೆ. ಗುಪ್ತಾ ಹಲವು ವರ್ಷಗಳಿಂದ ಕ್ಷಯರೋಗದಿಂದ ಬಳಲುತ್ತಿದ್ದು, ಈಗಾಗಲೇ ಚಿಕಿತ್ಸೆಗಾಗಿ 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು ಎಂದು ಸಂತ್ರಸ್ತ ಸಹೋದರ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಘಟನೆಯಿಂದ ದೆಹಲಿಯ ರಿಥಾಲಾದಿಂದ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಶಹೀದ್ ಸ್ಥಾಲ್​ಗೆ ಸಂಪರ್ಕ ಕಲ್ಪಿಸುವ ಕೆಂಪು ಮಾರ್ಗದ ಸೇವೆಗಳಲ್ಲಿ ವಿಳಂಬವಾಗಲಿದೆ. ಆದರೆ ಇತರೆ ಎಲ್ಲಾ ಮಾರ್ಗಗಳಲ್ಲಿ ಸಾಮಾನ್ಯ ಸೇವೆ ಇರಲಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೊಸ್ಟ್ ಮಾಡಿದೆ.

Ad
Ad
Nk Channel Final 21 09 2023
Ad