ಕೋಲ್ಕತ್ತಾ: ರ‍್ಯಾಗಿಂಗ್ ಬೆದರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 59 ಮಂದಿಯನ್ನು ಅಮಾನತುಗೊಳಿಸಲಾಗಿದೆ.
ರ‍್ಯಾಗಿಂಗ್, ಮನಿ ಲಾಂಡರಿಂಗ್ ಮತ್ತು ಬೆದರಿಕೆ ಆರೋಪಗಳ ತನಿಖೆಯ ನಂತರ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯು ಸಂಸ್ಥೆಯ 10 ವೈದ್ಯರನ್ನು ಹೊರಹಾಕಿದೆ. ಆಸ್ಪತ್ರೆಯಲ್ಲಿ ಕಿರುಕುಳ ನೀಡುವುದು, ಭಯದ ವಾತಾವರಣ ಸೃಷ್ಟಿಸುವುದು ಸೇರಿದಂತೆ ಹಲವು ಆರೋಪಗಳನ್ನು ವೈದ್ಯರು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾಲೇಜು ಕೌನ್ಸಿಲ್ ಸಭೆಯಲ್ಲಿ ಈ ವೈದ್ಯರನ್ನು ಹಾಸ್ಟೆಲ್‌ನಿಂದ ಶಾಶ್ವತವಾಗಿ ಹೊರಹಾಕಲು ನಿರ್ಧರಿಸಲಾಯಿತು. ಅವರ ಮನೆಗಳಿಗೂ ನೋಟಿಸ್ ಕಳುಹಿಸಲಾಯಿತು. 10 ವೈದ್ಯರ ಉಚ್ಚಾಟನೆಯೊಂದಿಗೆ, ಇಂಟರ್ನಿಗಳು, ವಿದ್ಯಾರ್ಥಿಗಳು ಮತ್ತು ಗೃಹ ಸಿಬ್ಬಂದಿ ಸೇರಿದಂತೆ ಒಟ್ಟು 59 ಜನರನ್ನು ಅಮಾನತುಗೊಳಿಸಲಾಗಿದೆ.
Ad