ತಿರುಚಿರಾಪಳ್ಳಿ : ಹೈಡ್ರಾಲಿಕ್ ಸಮಸ್ಯೆಯಿಂದಾಗಿ ಶಾರ್ಜಾಕ್ಕೆ ತೆರಳುವ ಏರ್ ಇಂಡಿಯಾ ವಿಮಾನ AXB613 ತಮಿಳುನಾಡಿನ ತಿರುಚ್ಚಿಯ ವಾಯಪ್ರದೇಶದ ಮೇಲೆ ಕಳೆದ ಎರಡು ಗಂಟೆಗಳಿಂದ ಹಾರಾಟ ನಡೆಸುತ್ತಿದ್ದು, 140 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ತಿರುಚ್ಚಿ ವಿಮಾನ ನಿಲ್ದಾಣದಲ್ಲಿಯೇ ವಿಮಾನವನ್ನು ಲ್ಯಾಂಡ್ ಮಾಡುವಂತೆ ಪೈಲಟ್‌ಗೆ ಸೂಚನೆ ನೀಡಲಾಗಿತ್ತು. ವಿಮಾನದಲ್ಲಿರುವ ಹೆಚ್ಚುವರಿ ಇಂಧನವನ್ನು ಸುಡುವ ನಿಟ್ಟಿನಲ್ಲಿ ಹೋಲ್ಡಿಂಗ್ ಮಾದರಿಯಲ್ಲಿ ತಿರುಚ್ಚಿಯ ವಾಯುಪ್ರದೇಶದಲ್ಲಿ ಹಾರಾಟ ಮಾಡುವಂತೆ ತಿಳಿಸಲಾಗಿತ್ತು. ರಾತ್ರಿ 7.45ರ ವೇಳೆಗೆ ವಿಮಾನ ನಿಲ್ದಾಣ ಸುರಕ್ಷಿತವಾಗಿ ಬೆಲ್ಲಿ ಲ್ಯಾಂಡಿಂಗ್ ಮಾಡಿದ್ದು, ಎಲ್ಲಾ ಪ್ರಯಾಣಿಕರು ಸೇಫ್ ಆಗಿದ್ದಾರೆ. 140 ಪ್ರಯಾಣಿಕರಿದ್ದ ವಿಮಾನವು ತಿರುಚ್ಚಿ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಸಂಜೆ 5.43 ಕ್ಕೆ ಹೊರಟಿತ್ತು. ವಿಮಾನ ಮೇಲೇರುತ್ತಲೇ ತಾಂತ್ರಿಕ ಅಡಚಣೆ ಉಂಟಾಗಿತ್ತು.
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ವಿಮಾನದಲ್ಲಿರೋ ಎಲ್ಲರೂ ಸೇಫ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಲ್ಯಾಂಡಿಂಗ್ ಗೇರ್ ಬಳಸದೆಯೇ ವಿಮಾನ ಲ್ಯಾಂಡ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್ ಹಾಗೂ ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.