Bengaluru 29°C
Ad

ನವದೆಹಲಿ: ಟೇಕಾಫ್‌ ಆಗಲು 20 ಗಂಟೆ ತಡ ಮಾಡಿದ ಏರ್‌ ಇಂಡಿಯಾ

ದೆಹಲಿಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ  ವಿಮಾನವು 20 ಗಂಟೆ ತಡ ಮಾಡಿದ ಘಟನೆ ನಡೆದಿದೆ.

ನವದೆಹಲಿ: ದೆಹಲಿಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ  ವಿಮಾನವು 20 ಗಂಟೆ ತಡ ಮಾಡಿದ ಘಟನೆ ನಡೆದಿದೆ.

ದೆಹಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಹಾರಾಟ ನಡೆಸಬೇಕಿದ್ದ ವಿಮಾನವು 20 ಗಂಟೆ ತಡ ಮಾಡಿತು. ಪ್ರಯಾಣಕ್ಕಾಗಿ ಕಾದು ಕುಳಿತಿದ್ದ ಪ್ರಯಾಣಿಕರಲ್ಲಿ ಕೆಲವರು ಎಸಿ ಇಲ್ಲದೇ ಮೂರ್ಛೆ ಹೋದರು.

ಕಾರ್ಯಾಚರಣೆಯ ಸಮಸ್ಯೆಗಳಿಂದ ವಿಮಾನವು ವಿಳಂಬವಾಯಿತು. ಫ್ಲೈಟ್ ಡ್ಯೂಟಿ ಸಮಯದ ಮಿತಿಯಿಂದಾಗಿ ಸಿಬ್ಬಂದಿ ಬದಲಾವಣೆಗಾಗಿ ಕಾಯಬೇಕಾಯಿತು ಎಂದು ಏರ್‌ಲೈನ್ಸ್‌ ​​​​ಮೂಲಗಳು ತಿಳಿಸಿವೆ.

ವಿಮಾನ ಪ್ರಯಾಣ ವಿಳಂಬದಿಂದ ನಮ್ಮ ಅವಸ್ಥೆ ಹೇಗಾಗಿದೆ ಎಂದು ಕೆಲವರು ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವಿಳಂಬದ ಕಾರಣಕ್ಕೆ ಏರ್ ಇಂಡಿಯಾ ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಮತ್ತು ಹೋಟೆಲ್ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದೆ ಎನ್ನಲಾಗಿದೆ. ಆದರೆ ವಿಮಾನಯಾನ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

Ad
Ad
Nk Channel Final 21 09 2023
Ad