ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಿಂದಾಗಿ ನೂರಾರು ಜನರು ಪ್ರಾಣ, ಮನೆ ಮಠ ಕಳೆದುಕೊಂಡಿದ್ದಾರೆ. ಈ ಕಂಡು ಕೇಳರಿಯದ ದುರಂತಕ್ಕೆ ಇಡೀ ದೇಶವೇ ಮರುಗಿದೆ.
ಇದೀಗ ವಯನಾಡಿನ ಜನರ ಸಹಾಯಕ್ಕೆ ಸೆಲೆಬ್ರಿಟಿಗಳು ಸೇರಿದಂತೆ ಹಲವರು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾ ತಾರೆಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷ ಲಕ್ಷ ಹಣ ದೇಣಿಗೆ ನೀಡಿದ್ದಾರೆ. ಆದರೆ ಈ ಲಿಸ್ಟ್ ನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಹೆಸರಿರಲಿಲ್ಲ ಎನ್ನುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ಇನ್ನು ಸಂತ್ರಸ್ತರಿಗೆ ಪರಿಹಾರ ನೀಡಲು ಅವಿರತವಾಗಿ ಶ್ರಮಿಸುತ್ತಿರುವ ಸೈನಿಕರು, ಸ್ವಯಂಸೇವಕರು ಮತ್ತು ವಿವಿಧ ಅಧಿಕಾರಿಗಳ ಶೌರ್ಯ ಮತ್ತು ಸಮರ್ಪಣಾ ಮನೋಭಾವಕ್ಕೆ ತಾರೆಯರ ಮಾತುಗಳು ಶ್ಲಾಘನೀಯ ಎಂದು ನಟ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸದ್ಯ ಪೋಸ್ಟ್ ವೈರಲ್ ಆಗಿದೆ.ನಾವು ಈ ಮೊದಲು ಸವಾಲುಗಳನ್ನು ಎದುರಿಸಿದ್ದೇವೆ. ಬಲಶಾಲಿಯಾಗಿದ್ದೇವೆ ಎಂದಿದ್ದಾರೆ. ಈ ಕಷ್ಟದ ಸಮಯದಲ್ಲಿ ನಾವು ಒಟ್ಟಿಗೆ ನಿಂತು ನಮ್ಮ ಒಗ್ಗಟ್ಟಿನ ಶಕ್ತಿಯನ್ನು ತೋರಿಸಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಇದರೊಂದಿಗೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸೇನೆಯ ಚಿತ್ರಗಳನ್ನು ಸಹ ನಟ ಹಂಚಿಕೊಂಡಿದ್ದಾರೆ.