Bengaluru 24°C
Ad

ಆಕಸ್ಮಿಕ ಹಿಂದೂಗಳಿಂದ ದೇಶಕ್ಕೆ ನಿಷ್ಠೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ: ಯೋಗಿ ಆದಿತ್ಯನಾಥ್‌

ಆಕಸ್ಮಿಕ ಹಿಂದೂಗಳಿಂದ ದೇಶಕ್ಕೆ ನಿಷ್ಠೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂಡೀಗಢ: ಆಕಸ್ಮಿಕ ಹಿಂದೂಗಳಿಂದ ದೇಶಕ್ಕೆ ನಿಷ್ಠೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಯಾಣ ಪ್ರಚಾರ­ದಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮ­ಮಂದಿರದಿಂದ ದೇಶವೇ ಸಂಭ್ರಮಿಸು­ತ್ತಿದೆ. ಆದರೆ ಕಾಂಗ್ರೆಸ್‌ನ “ಆಕಸ್ಮಿಕ ಹಿಂದೂ’ಗಳಿಗೆ ಇದನ್ನೂ ಸಹಿಸಲಾಗುತ್ತಿಲ್ಲ. ಇದೇ ರಾಮನ ಸಂಸ್ಕೃತಿಗೂ ರೋಮ್‌ ಸಂಸ್ಕೃತಿಗೂ ಇರುವ ವ್ಯತ್ಯಾಸ ಎಂದರು. ರಾಹುಲ್‌ ಗಾಂಧಿ ರಾಮ ಮಂದಿ ಉದ್ಘಾಟನೆಯನ್ನು “ನಾಚ್‌ ಗಾನಾ’ ಕಾರ್ಯ­ಕ್ರಮ ಎಂದು ಟೀಕಿಸಿದ್ದಕ್ಕೆ ತಿರುಗೇಟು ನೀಡಿದ್ದಾರೆ.

Ad
Ad
Nk Channel Final 21 09 2023