Ad

ಯುವಕನ ಅತೀವೇಗದ ಚಾಲನೆಗೆ ಸೆಕ್ಯೂರಿಟಿ ಗಾರ್ಡ್ ಬಲಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

 20 ವರ್ಷದ ಯುವಕನೋರ್ವನ ಅತೀ ವೇಗದ ಕಾರು ಚಾಲನೆಗೆ ಪಾದಚಾರಿ ಸೆಕ್ಯೂರಿಟಿ ಗಾರ್ಡ್‌ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ. 

ಹೈದರಾಬಾದ್‌:   20 ವರ್ಷದ ಯುವಕನೋರ್ವನ ಅತೀ ವೇಗದ ಕಾರು ಚಾಲನೆಗೆ ಪಾದಚಾರಿ ಸೆಕ್ಯೂರಿಟಿ ಗಾರ್ಡ್‌ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ.

ಹೈದರಾಬಾದ್‌ನ ಜೆಡ್ಡಿಮೆಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕುತುಬುಲ್ಲಾಪುರ್ ಸಮೀಪದ ಗಜುಲಾ ರಾಮರಾಮ್ ಎಂಬಲ್ಲಿ ಈ ಘಟನೆ ನಡೆದಿದೆ. ಈ ಕಾರನ್ನು 20 ವರ್ಷದ ವಿದ್ಯಾರ್ಥಿಯೋರ್ವ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ಯುವಕ ಸೀದಾ ಬಂದು ರಸ್ತೆಬದಿಯಲ್ಲಿ ನಡೆದು ಹೋಗುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಒಬ್ಬರಿಗೆ ಗುದ್ದಿದ್ದಾನೆ. ರಸ್ತೆ ಬದಿ ನಡೆದು ಹೋಗುತ್ತಿದ್ದ ಅವರು ಕಾರು ಡಿಕ್ಕಿ ಹೊಡೆದ ರಭಸಕ್ಕೆ  6 ರಿಂದ 7 ಅಡಿ ಯಷ್ಟು ಎತ್ತರಕ್ಕೆ ಹಾರಿ ಕಂಪೌಂಡ್‌ ಒಳಗೆ ಬಂದು ಬಿದ್ದಿದ್ದಾರೆ. ಅಲ್ಲದೇ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕಾರು ಇವರಿಗೆ ಡಿಕ್ಕಿ ಹೊಡೆದ ನಂತರ ಸಮೀಪದ ಗೇಟ್‌ಗೂ ಡಿಕ್ಕಿ ಹೊಡೆದು ನಿಂತಿದೆ.

ಘಟನೆಯಲ್ಲಿ ಆತನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಹಾಗೆಯೇ ಈ ದುರಂತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಗೋಪಿ ಎಂದು ಗುರುತಿಸಲಾಗಿದ್ದು, ಸೆಕ್ಯೂರಿಟಿ ಗಾರ್ಡ್ ಆಗಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023