ರಾಜಸ್ಥಾನ: ಟಾಟಾ ಎಸಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಮಗು ಸೇರಿ ಐವರು ಮೃತಪಟ್ಟ ಘಟನೆ ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ.
ಅಪಘಾತದಲ್ಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮ್ಯಾಂಗ್ರೋಲ್ ಮೋರಿ ಬಳಿ ಅಪರಿಚಿತ ವಾಹನ ಬೈಕ್ಗೆ ಗುದ್ದಿ ಐವರು ಸಾವಿಗೀಡಾಗಿದ್ದಾರೆ.
ಸಾವನ್ನಪ್ಪಿದ ಐವರು ಬೈಕ್ನಲ್ಲಿ ತೆರಳುತ್ತಿದ್ದರು. ಚಿತ್ತೋರ್ಗಢದಿಂದ ನಿಂಬಹೇರಾ ಕಡೆಗೆ ಹೋಗುವ ವೇಳೆ ಅಪರಿಚತ ವಾಹನ ಬಂದು ಗುದ್ದಿದೆ. ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತರಲ್ಲಿ ಒಬ್ಬರನ್ನು ಭದೇಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಪೀಪಲ್ ವಾಸ್ ಗ್ರಾಮದ ಜೀವನ್ ಹರಿಜನ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವತಿಯನ್ನು ನಿಂಬಹೇರಾ ಜಿಲ್ಪಾಸ್ಪತ್ರೆಗೆ ದಾಖಲಿಸಲಾಗಿದೆ.