Bengaluru 30°C

ಕಟ್ಟಡದ 3ನೇ ಫ್ಲೋರ್‌ನಲ್ಲಿದ್ದ ಏಸಿ ಬಾಕ್ಸ್ ಬಿದ್ದು ಯುವಕ ಸಾವು : ವೀಡಿಯೋ ವೈರಲ್

ನವದೆಹಲಿ: ಕಟ್ಟಡದ ಹೊರಗೆ ನಿಂತಿದ್ದ 19 ವರ್ಷದ ತರುಣನೋರ್ವನ ಮೇಲೆ ಕಟ್ಟಡದ ಮೂರನೇ ಪ್ಲೋರ್‌ನಲ್ಲಿ ಫಿಕ್ಸ್ ಮಾಡಲಾಗಿದ್ದ ಏರ್ ಕಂಡೀಷನ್‌ನ ಬಾಕ್ಸ್ ಬಿದ್ದು, ಹುಡುಗ ಸ್ಥಳದಲ್ಲೇ ಪ್ರಾಣಬಿಟ್ಟ ಆಘಾತಕಾರಿ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರೋಲ್ ಬಾಗ್‌ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ಆಘಾತಕಾರಿ ಘಟನೆಯ ದೃಶ್ಯಾವಳಿ ಸೆರೆ ಆಗಿದೆ. ಇಬ್ಬರು ಹುಡುಗರು ಮಾತನಾಡುತ್ತ ನಿಂತಿದ್ದ ವೇಳೆ ಈ ಘಟನೆ ಸಂಭವಿಸಿದೆ.


ಕಟ್ಟಡದಿಂದ ಕಳಚಿಕೊಂಡ ಏಸಿ ಬಾಕ್ಸ್‌ ಸೀದಾ ಬಂದು ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಹುಡುಗನ ಮೇಲೆ ಬಿದ್ದು, ಬಳಿಕ ನೆಲಕ್ಕೆ ಬಿದ್ದಿದೆ. ಎಸಿ ಬಿದ್ದ ರಭಸಕ್ಕೆ ಇಬ್ಬರೂ ಹುಡುಗರು ಕೆಳಗೆ ಬಿದ್ದಿದ್ದಾರೆ. ಆದರೆ ದುರಾದೃಷ್ಟವಶಾತ್ ಸ್ಕೂಟರ್‌ನಲ್ಲಿ ಕುಳಿತಿದ್ದ ತರುಣ ದಾರುಣವಾಗಿ ಸಾವನ್ನಪ್ಪಿದ್ದಾನೆ. ಆಗಸ್ಟ್ 17 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.


Nk Channel Final 21 09 2023