2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬರೋಬ್ಬರಿ 2,587 ಮಂದಿ ಐಟಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಭಾರತದ ಅತೀ ದೊಡ್ಡ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, HCLtech, ವಿಪ್ರೋ, ಟೆಕ್ ಮಹೀಂದ್ರಾದಲ್ಲೇ ಲೇ ಆಫ್ ನಡೆದಿದೆ.
ಅನೇಕ ಐಟಿ ಕಂಪನಿಗಳಲ್ಲಿ ನೇಮಕಾತಿ ಆಗಬೇಕಿದೆ. ಟಿಸಿಎಸ್ ಮತ್ತು ಟೆಕ್ ಮಹೀಂದ್ರಾಗೆ ಭಾರೀ ಹಿನ್ನಡೆ ಆಗಿದೆ. ಟಿಸಿಎಸ್ ಈಗಾಗಲೇ 5,370 ಉದ್ಯೋಗಿಗಳನ್ನು ತೆಗೆದು ಹಾಕಿದೆ. ಟೆಕ್ ಮಹೀಂದ್ರಾ ಕೂಡ 3,785 ಮಂದಿಗೆ ಕೊಕ್ ನೀಡಿದೆ.
ಇನ್ನೊಂದೆಡೆ ಇನ್ಫೋಸಿಸ್ ಮತ್ತು ಹೆಚ್‌ಸಿಎಲ್ ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡಿವೆ. ಇನ್ಫೋಸಿಸ್ ಈ ತ್ರೈಮಾಸಿಕದಲ್ಲಿ 5,591 ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. 2026ರ ಹಣಕಾಸು ವರ್ಷದಲ್ಲಿ 20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ.
ಹೆಚ್‌ಸಿಎಲ್ ಟೆಕ್ ನೇಮಕಾತಿ ಸಂಖ್ಯೆಯನ್ನು 7,000ಕ್ಕೆ ಮಿತಿಗೊಳಿಸಿದೆ. ಮುಂದಿನ ದಿನಗಳ ಈ ಐದು ಕಂಪನಿಗಳು ಬರೋಬ್ಬರಿ 15,033 ಮಂದಿ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.