Bengaluru 22°C
Ad

ಹೋಟೆಲ್‌ನಲ್ಲಿ ಆಲೂಗಡ್ಡೆ ಬಾಕ್ಸ್​ನಲ್ಲಿ ಹೆಬ್ಬಾವು ಪತ್ತೆ!

ಆಲೂಗಡ್ಡೆ ಬಾಕ್ಸ್​ನಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿರುವ ಘಟನೆ ಚಂದ್ರಾಪುರದ ಹೋಟೆಲ್‌ವೊಂದರಲ್ಲಿ ನಡೆದಿದೆ.

ಮಹಾರಾಷ್ಟ್ರ: ಆಲೂಗಡ್ಡೆ ಬಾಕ್ಸ್​ನಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿರುವ ಘಟನೆ ಚಂದ್ರಾಪುರದ ಹೋಟೆಲ್‌ವೊಂದರಲ್ಲಿ ನಡೆದಿದೆ. ಲೋಹರಾ ಗ್ರಾಮದ ಹೋಟೆಲ್‌ನಲ್ಲಿ ಇರಿಸಲಾಗಿದ್ದ ಆಲೂಗಡ್ಡೆ ಬಾಕ್ಸ್‌ನಲ್ಲಿ ಹಾವು ಪತ್ತೆಯಾಗಿದೆ. ಆಲೂಗಡ್ಡೆಗಳ ಮೇಲೆ ಹಾವು ಮಲಗಿರುವ ವಿಡಿಯೋ ವೈರಲ್ ಆಗಿದೆ.

ಹೋಟೆಲ್ ಸಿಬ್ಬಂದಿಯೊಬ್ಬರು ಅಡುಗೆಗೆಂದು ಆಲೂಗಡ್ಡೆ ತೆಗೆದುಕೊಳ್ಳಲು ಹೋದಾಗ ಹೆಬ್ಬಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.ಬಾಕ್ಸ್‌ನಲ್ಲಿ ಹಾವು ಇದೆ ಎಂಬ ಸುದ್ದಿ ತಿಳಿದ ಹೋಟೆಲ್‌ನಲ್ಲಿ ಗೊಂದಲ ಉಂಟಾಗಿತ್ತು. ಹೋಟೆಲ್ ಮಾಲೀಕರು ಹಾವು ಹಿಡಿಯುವವರಿಗೆ ಕರೆ ಮಾಡಿದ ನಂತರ ಅದನ್ನು ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಒಬ್ಬ ವ್ಯಕ್ತಿಯು ಕಾಡಿನಲ್ಲಿ ಜಲಮೂಲದ ಬಳಿ ಹೆಬ್ಬಾವನ್ನು ಬಿಡುತ್ತಿರುವುದನ್ನು ಕಾಣಬಹುದು.

https://x.com/Live_Dainik/status/1833770652647719158?

Ad
Ad
Nk Channel Final 21 09 2023