ಆಗ್ರಾ: ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮಹಿಳಾ ಸಹೋದ್ಯೋಗಿ ಜತೆ ಮನೆಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಪತ್ನಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಆಗ್ರಾದಲ್ಲಿ ನಡೆದಿದೆ.
ಇಬ್ಬರ ನಡುವೆ ಮೊದಲೇ ವೈವಾಹಿಕ ಕಲಹ ಏರ್ಪಟ್ಟಿತ್ತು. ಮಹಿಳಾ ಇನ್ಸ್‌ಪೆಕ್ಟರ್ ರಾಕಬ್‌ಗಂಜ್ ಪೊಲೀಸ್ ಠಾಣೆಯವರಾಗಿದ್ದರೆ, ಮತ್ತೊಬ್ಬ ಇನ್ಸ್‌ಪೆಕ್ಟರ್ ಮುಜಾಫರ್‌ನಗರ ಪೊಲೀಸ್ ಠಾಣೆಯವರಾಗಿದ್ದಾರೆ.
ಇಬ್ಬರೂ ನೋಯ್ಡಾದಲ್ಲಿ ನಿಯೋಜನೆಗೊಂಡಾಗ ಮೊದಲು ಭೇಟಿಯಾಗಿದ್ದರು ಮತ್ತು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾದ ನಂತರ ಅವರು ಪರಸ್ಪರ ಭೇಟಿಯಾಗುತ್ತಿದ್ದರು. ಪತಿ ಮೇಲೆ ಅನುಮಾನಗೊಂಡ ಮಹಿಳೆ ಸಂಬಂಧಿಕರನ್ನು ಕರೆದುಕೊಂಡು ಆಗ್ರಾದಲ್ಲಿರುವ ಮಹಿಳಾ ಇನ್ಸ್‌ಪೆಕ್ಟರ್ ಮನೆಗೆ ಹೋಗಿದ್ದಾರೆ. ಇಬ್ಬರೂ ಹೊರಗೆ ಬರಲು ನಿರಾಕರಿಸಿದಾಗ ಬಾಗಿಲು ಒಡೆದು ಹಲ್ಲೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ವಿಜಿಲೆನ್ಸ್ ಇಲಾಖೆಗೆ ವರ್ಗಾವಣೆಗೊಂಡು ಮಹಿಳಾ ಅಧಿಕಾರಿ ಪ್ರಿಯಕರನೊಂದಿಗೆ ಇರಲು ಆಗ್ರಾಕ್ಕೆ ಬಂದಿದ್ದರು ಎಂದು ಇನ್ಸ್‌ಪೆಕ್ಟರ್ ಪತ್ನಿ ಆರೋಪಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವಾರು ಜನರು ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕುತ್ತಿರುವುದನ್ನು ಕಾಣಬಹುದು. ಆಗ್ರಾದ ಪೊಲೀಸ್ ಕಮಿಷನರ್ ದಾಳಿಯನ್ನು ತಡೆಯಲು ಪ್ರಯತ್ನಿಸುವ ಬದಲು ಕಾರ್ಯಕ್ರಮವನ್ನು ಚಿತ್ರೀಕರಿಸಿದ ಆರೋಪದ ಮೇಲೆ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.