ಗುಜರಾತ್: ಕೆಲವು ಕಾರ್ಮಿಕರು ಗೋಡೌನ್‌ನಲ್ಲಿ ಗೋಧಿಯ ಮೂಟೆಗಳನ್ನು ಇಳಿಸುತ್ತಿದ್ದಾಗ ಓರ್ವ ಕಾರ್ಮಿಕ ಸಾವನ್ನಪ್ಪಿದ ದಾರುಣ ಘಟನೆಯೊಂದು ಗುಜರಾತ್ ನ ಅಮ್ರೇಲಿಯಲ್ಲಿ ನಡೆದಿದೆ.
ಘಟನೆಯ ವೇಳೆ ಇದ್ದಕ್ಕಿದ್ದಂತೆ ಗೋಧಿಯ ಮೂಟೆಗಳು ಕಾರ್ಮಿಕರ ಮೇಲೆ ಬಿದ್ದವು. ಗೋಣಿಚೀಲಗಳು ಕುಸಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಗೋಣಿಚೀಲದಡಿ ಸಿಲುಕಿದ್ದ ಕಾರ್ಮಿಕರನ್ನು ಸಹ ಕಾರ್ಮಿಕರು ಹೊರತೆಗೆದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Ad