Bengaluru 16°C

ಮಹಾಕುಂಭ ಮೇಳ: ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಪುಣ್ಯಸ್ನಾನ

ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶುಕ್ರವಾರ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದರು.

ಪ್ರಯಾಗ್ ರಾಜ್: ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶುಕ್ರವಾರ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದರು.


ಬಳಿಕ ಆಶೀರ್ವಚನ ನೀಡಿದ ಪೇಜಾವರ ಶ್ರೀಗಳು, ನಾವು ಏನೇ ಶುಭ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ನದಿಗಳನ್ನು ಸ್ಮರಿಸುತ್ತೇವೆ. ನದಿಗಳ ಸ್ಮರಣೆ ಮಾಡುವ‌ ಮೂಲಕ ಪವಿತ್ರರಾಗುತ್ತೇವೆ.


ನದಿಗಳೆಲ್ಲವೂ ಭಗವಂತನ ಪಾದದಿಂದ ಹರಿದು ಬಂದವು. ಅಂತಹ ಪುಣ್ಯ ನದಿಗಳ ಸಂಗಮ ಸ್ಥಳದಲ್ಲಿ ಇಂದು ಪವಿತ್ರ ಸ್ನಾನ ಮಾಡಿದ್ದು, ಎಲ್ಲರಿಗೂ ಒಳಿತಾಗಲಿ, ದೇಶಕ್ಕೆ ಸುಭಿಕ್ಷೆಯಾಗಲಿ ಎಂದು ಹಾರೈಸಿದರು.


Nk Channel Final 21 09 2023