ನವದೆಹಲಿ: ಭಾರತದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಕುಟುಂಬಸ್ಥರ ಮಧ್ಯೆ ಪ್ರೀತಿಯ ಶ್ವಾನವೂ ಅಂತಿಮ ವಿದಾಯ ಸಲ್ಲಿಸಿದೆ. ರತನ್ ಟಾಟಾ (86) ಅವರು ನಿನ್ನೆ ತಡರಾತ್ರಿ ವಯೋಸಹಜ ಖಾಯಿಲೆಯಿಂದ ಕೊನೆಯುಸಿರೆಳೆದರು.
ರತನ್ ಟಾಟಾ ಅವರಿಗೆ ಶ್ವಾನಗಳೆಂದರೆ ಅಚ್ಚುಮೆಚ್ಚು ಆಗಿದ್ದವು. ಗೋವಾ ಎಂಬ ಹೆಸರಿನ ಶ್ವಾನದ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು. ಗೋವಾ ಕಂಡರೆ ಅವರಿಗೆ ಅಚ್ಚುಮೆಚ್ಚಾಗಿತ್ತು.ಅವರು ಪ್ರೀತಿಯಿಂದ ಸಾಕಿದ್ದ ಗೋವಾ ಅಂತಿಮ ವಿದಾಯ ಸಲ್ಲಿಸಿದೆ.
ರತನ್ ಟಾಟಾ ಅವರ ಅಂತ್ಯಕ್ರಿಯೆಗೆ ಆಗಮಿಸಿದ ಗೋವಾ ಶ್ವಾನ, ಅವರಿದ್ದ ಶವಪೆಟ್ಟಿಗೆ ಮೇಲೆ ಕುಳಿತು ಅಂತಿಮ ನಮನ ತಿಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
https://x.com/_prashantnair/status/1844322310431572230?
Ad