Bengaluru 30°C

ದೆಹಲಿಯಲ್ಲಿ ರುಂಡವಿಲ್ಲದ ನವಜಾತ ಶಿಶುವನ್ನು ಎಳೆದೊಯ್ದ ನಾಯಿ!

ರೋಹಿಣಿ ಬಳಿಯ ಪಾರ್ಕ್​ವೊಂದರಲ್ಲಿ ನಾಯಿಯೊಂದು ರುಂಡವಿಲ್ಲದ ನವಜಾತ ಶಿಶುವಿನ ದೇಹವನ್ನು ಎಳೆದೊಯ್ಯುತ್ತಿದ್ದ ಭಯಾನಕ ದೃಶ್ಯ ಕಂಡುಬಂದಿದೆ.

ದೆಹಲಿ: ನಾಯಿಯೊಂದು ರುಂಡವಿಲ್ಲದ ನವಜಾತ ಶಿಶುವಿನ ದೇಹವನ್ನು ಎಳೆದೊಯ್ಯುತ್ತಿದ್ದ ಭಯಾನಕ ದೃಶ್ಯ ರೋಹಿಣಿ ಬಳಿಯ ಪಾರ್ಕ್​ವೊಂದರಲ್ಲಿ ಕಂಡುಬಂದಿದೆ.


ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಪ್ರಾಥಮಿಕ ತನಿಖೆಯಲ್ಲಿ ಪಾರ್ಕ್​ನಲ್ಲಿ ಶಿಶುವನ್ನು ಎಸೆದ ಬಳಿಕ ಅದು ಮೃತಪಟ್ಟಿರುವಂತೆ ಕಾಣುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪಾರ್ಕ್​ನಲ್ಲಿ ಓಡಾಡುವವರು ತಲೆ ಇಲ್ಲದ ಶಿಶುವನ್ನು ನಾಯಿ ಎಳೆದೊಯ್ಯುತ್ತಿದ್ದುದನ್ನು ಕಂಡು ಬಳಿಕ ನಮಗೆ ಮಾಹಿತಿ ನೀಡಿದ್ದಾರೆ. ಎರಡು ಅಥವಾ ಮೂರು ದಿನಗಳ ಹಿಂದೆ ಮಗುವನ್ನು ಪಾರ್ಕ್​ನಲ್ಲಿ ಎಸೆದಿರಬಹುದು ಎಂದು ಹೇಳಲಾಗುತ್ತಿದೆ.


ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉದ್ಯಾನದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆ ಇದ್ದು ಅಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಶಿಶುವನ್ನು ಎಸೆದ ವ್ಯಕ್ತಿಯನ್ನು ಗುರುತಿಸಲು ಹತ್ತಿರವಿರುವ ಸಿಸಿಟಿವಿಯನ್ನು ಪರೀಕ್ಷಿಸಲಾಗುತ್ತಿದೆ.


Nk Channel Final 21 09 2023