Ad

ನೀರು ಪೂರೈಕೆಯ ವಾಹನ ಟ್ಯಾಂಕ್​ ನಲ್ಲಿ ಮಹಿಳೆಯ ಮೃತದೇಹ ಪತ್ತೆ

ಕುಡಿಯುವ ನೀರನ್ನು ಪೂರೈಕೆ ಮಾಡಲು ಬಂದಿದ್ದ ವಾಹನ ಟ್ಯಾಂಕ್​ ಒಳಗೆ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯ ಫುರ್ಸುಂಗಿ ಪ್ರದೇಶದಲ್ಲಿ ನಡೆದಿದೆ.

ಮಹಾರಾಷ್ಟ್ರ : ಕುಡಿಯುವ ನೀರನ್ನು ಪೂರೈಕೆ ಮಾಡಲು ಬಂದಿದ್ದ ವಾಹನ ಟ್ಯಾಂಕ್​ ಒಳಗೆ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯ ಫುರ್ಸುಂಗಿ ಪ್ರದೇಶದಲ್ಲಿ ನಡೆದಿದೆ.

Ad
300x250 2

ಟ್ಯಾಂಕರ್​ ಬರ್ತಿದ್ದಂತೆಯೇ ಸ್ಥಳೀಯರು ನೀರು ತುಂಬಿಸಿಕೊಳ್ಳಲು ಶುರುಮಾಡಿದ್ದಾರೆ. ಸ್ವಲ್ಪ ಸಮಯ ನೀರು ತುಂಬಿಸಿಕೊಳ್ತಿದ್ದಂತೆ ಟ್ಯಾಂಕ್​ನಿಂದ ನೀರು ಬರೋದು ಸ್ಟಾಪ್ ಆಗಿದೆ. ಆಗ ಡ್ರೈವರ್​​ ಟ್ಯಾಂಕ್​​ನ ಪೈಪ್ ಪರಿಶೀಲನೆ ನಡೆಸಿದ್ದಾರೆ. ಆಗ ಸೀರೆಯೊಂದು ಪೈಪ್​​ಗೆ ಒಳಗೆ ಸಿಲುಕಿ ಬ್ಲಾಕ್ ಆಗಿರೋದು ಪತ್ತೆಯಾಗಿದೆ.

ಡ್ರೈವರ್ ಟ್ಯಾಂಕ್ ಹತ್ತಿ ನೋಡಿದಾಗ 25 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಕೌಶಲ್ಯ ಮುಕೇಶ್ ಚೌಹಾನ್ ಮೃತ ಮಹಿಳೆ. ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದ್ದಾರೆ. ಮೃತ ಯುವತಿಯ ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಅಸಲಿ ಕಾರಣ ಗೊತ್ತಾಗಲಿದೆ.

ರಾತ್ರಿ ವೇಳೆ ಟ್ಯಾಂಕರ್ ಡ್ರೈವರ್ ಹಾಗೂ ಮೃತ ಯುವತಿ ಒಂದೇ ಬಿಲ್ಡಿಂಗ್​ನಲ್ಲಿ ವಾಸವಿದ್ದರು. ರಾತ್ರಿ ಬಿಲ್ಡಿಂಗ್ ಕೆಳಗೆ ಟ್ಯಾಂಕರ್ ನಿಲ್ಲಿಸಿದ್ದ. ಈ ವೇಳೆ ಏನೋ ಅನಾಹುತ ನಡೆದಿದೆ ಎಂಬ ಅನುಮಾನ ಶುರುವಾಗಿದೆ. ಹಂಡೆವಾಡಿ ಜೆಎಸ್​​ಪಿಎಂ ಕಾಲೇಜು ಬಳಿ ಮಹಿಳೆ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದಳು. ಇವವರು ಮೂಲತಃ ಉತ್ತರ ಪ್ರದೇಶದವರು. ಕೇವಲ ಒಂದು ತಿಂಗಳ ಹಿಂದಷ್ಟೇ ಮಹಾರಾಷ್ಟ್ರಕ್ಕೆ ಬಂದಿದ್ದರು ಎನ್ನಲಾಗಿದೆ.

Ad
Ad
Nk Channel Final 21 09 2023
Ad