ಬಾದಾಮಿ: ದಲಿತ ಸಮುದಾಯದ ವ್ಯಕ್ತಿಯೊಬ್ಬ ದೇವಸ್ಥಾನದ ಬಳಿ ಬಂದ ಎಂದು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದು, ಗ್ರಾಮದಿಂದ ದಲಿತ ಸಮುದಾಯವನ್ನೇ ಬಹಿಷ್ಕಾರ ಹಾಕಿರುವ ಘಟನೆ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದಿದೆ.
ಅರ್ಜುನ್ ಮಾದರ ಎಂಬಾತನನ್ನು ಕಂಬಕ್ಕೆ ಕಟ್ಟಿದ್ದಾರೆ. ಈತ ಗ್ರಾಮದ ದೇವಸ್ಥಾನ ಪ್ರವೇಶ ಮಾಡಿದ ಅನ್ನೋ ಕಾರಣಕ್ಕೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ. ಇದಷ್ಟೇ ಅಲ್ಲ, ಇಡೀ ದಲಿತ ಸಮುದಾಯವನ್ನ ಗ್ರಾಮದಿಂದ ಬಹಿಷ್ಕಾರ ಹಾಕಿ ಡಂಗೂರ ಸಾರಿಸಿದ್ದಾರೆ
ಸೆಪ್ಟೆಂಬರ್ 10ರಂದು ನಡೆದ ಈ ಘಟನೆ, ದಲಿತ ಸಂಘಟನೆಗಳನ್ನ ಕೆರಳಿಸಿದೆ. ಗ್ರಾಮಕ್ಕೆ ಭೇಟಿ ನೀಡಿ ಬಳಿಕ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ. ಗ್ರಾಮದ 18 ಜನರ ವಿರುದ್ಧ FIR ದಾಖಲಾಗಿದೆ. ಅಮಾನವೀಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಸೇರಿ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
Ad