Bengaluru 23°C
Ad

ಡಿಸಿಎಂ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ: ಇಬ್ಬರ ಬಂಧನ

ತೆಲಂಗಾಣದ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಅವರ ಮನೆಯಲ್ಲಿ ದರೋಡೆ ನಡೆದಿತ್ತು.

ಹೈದರಾಬಾದ್: ತೆಲಂಗಾಣದ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಅವರ ಮನೆಯಲ್ಲಿ ದರೋಡೆ ನಡೆದಿತ್ತು. ಡಿಸಿಎಂ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ 2.2 ಲಕ್ಷ ರೂಪಾಯಿ ನಗದು, ಚಿನ್ನದ ಬಿಸ್ಕತ್ ಮತ್ತು ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಬಿಹಾರ ಮೂಲದ ರೋಷನ್ ಕುಮಾರ್ ಮಂಡಲ್ ಮತ್ತು ಉದಯ್ ಕುಮಾರ್ ಠಾಕೂರ್ ಎಂಬ ಶಂಕಿತರನ್ನು ಪಶ್ಚಿಮ ಬಂಗಾಳದ ಖರಗ್‌ಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದರು. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ನಂತರ ಅವರನ್ನು ಬಂಧಿಸಿದ್ದರು.

ಅಧಿಕಾರಿಗಳು ಆರೋಪಿಗಳಿಂದ 2.2 ಲಕ್ಷ ರೂ. ನಗದು, 100 ಗ್ರಾಂ ಚಿನ್ನದ ಬಿಸ್ಕತ್ತು ಮತ್ತು ಬ್ರಿಟಿಷ್ ಪೌಂಡ್‌ಗಳು, ಯುಎಇ ದಿರ್ಹಾಮ್‌ಗಳು ಮತ್ತು ಸ್ವಿಸ್ ಫ್ರಾಂಕ್‌ಗಳನ್ನು ಒಳಗೊಂಡ ವಿದೇಶಿ ಕರೆನ್ಸಿ ಸೇರಿದಂತೆ ಕದ್ದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಕ್ರಮಾರ್ಕ ಅವರು ಅಧಿಕೃತ ಪ್ರವಾಸದ ನಿಮಿತ್ತ ವಿದೇಶಕ್ಕೆ ತೆರಳಿದ್ದಾಗ ಈ ದರೋಡೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಡಿಸಿಎಂ ಮನೆಯಿಂದ ಕದ್ದ ಬೆಳ್ಳಿ ಪಾತ್ರೆಗಳು ಮತ್ತು ಮುತ್ತಿನ ಆಭರಣಗಳಂತಹ ಇತರೆ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೇ ಪೊಲೀಸ್ ಅಧಿಕಾರಿ ದೇಬಶ್ರೀ ಸನ್ಯಾಲ್ ಹೇಳಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅವರ ತಪ್ಪೊಪ್ಪಿಗೆಯ ನಂತರ, ಪಶ್ಚಿಮ ಬಂಗಾಳದ ಪೊಲೀಸರು ತೆಲಂಗಾಣದ ಪೊಲೀಸರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದರು.

Ad
Ad
Nk Channel Final 21 09 2023