ಪುಣೆ: ಮಹಾರಾಷ್ಟ್ರದ ಪುಣೆಯ ಉದ್ಯೋಗಿಯ ತಾಯಿ ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ ಮುಖ್ಯಸ್ಥರಿಗೆ ಬರೆದ ಪತ್ರವೊಂದು ವೈರಲ್ ಆದ ಬಳಿಕ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅತಿಯಾದ ಕೆಲಸದ ಒತ್ತಡದಿಂದಾಗಿ ಅರ್ನ್ಸ್ಟ್ ಮತ್ತು ಯಂಗ್ ಇಂಡಿಯಾದ 26 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಸಾವಿಗೀಡಾಗಿದ್ದಾರೆ ಎಂದು ಆಕೆಯ ತಾಯಿ ಆರೋಪಿಸಿದ್ದರು. ಇದೀಗ ಗಂಭೀರ ಸ್ವರೂಪವನ್ನು ತಾಳಿದ್ದು, ಇದಕ್ಕೆ ಕಾರಣವಾದ ಸಂದರ್ಭಗಳ ಕುರಿತು ತನಿಖೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಪುಣೆಯ ಮಹಿಳೆಯ ತಾಯಿ ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ ಮುಖ್ಯಸ್ಥರಿಗೆ ಬರೆದ ಪತ್ರವೊಂದು ವೈರಲ್ ಆದ ಬಳಿಕ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಕೆಲಸದೊತ್ತಡದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ತೀವ್ರ ಚರ್ಚೆ ಏರ್ಪಟ್ಟಿದೆ.
ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪುಣೆಯ ಅರ್ನ್ಸ್ಟ್ ಆ್ಯಂಡ್ ಯಂಗ್ (ಇವೈ) ಕಂಪನಿಯ 26 ವರ್ಷದ ಉದ್ಯೋಗಿಯ ಸಾವಿನ ಕುರಿತು ಕಾರ್ಮಿಕ ಸಚಿವಾಲಯವು ದೂರನ್ನು ಕೈಗೆತ್ತಿಕೊಂಡಿದೆ ಮತ್ತು ತನಿಖೆ ನಡೆಸುತ್ತಿದೆ ಎಂದಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪದ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದೆ.
“ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಈ ಕುರಿತು ಕಾರ್ಮಿಕ ಸಚಿವಾಲಯವು ಅಧಿಕೃತವಾಗಿ ದೂರನ್ನು ಕೈಗೆತ್ತಿಕೊಂಡಿದೆ” ಎಂದು ಶೋಭಾ ಕರಂದ್ಲಾಜೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಚಿವರು, ಮಹಿಳಾ ಉದ್ಯೋಗಿಯ ಸಾವು ತುಂಬಾ ದುಃಖಕರವಾಗಿದೆ. ಇದು ಹಲವು ಹಂತಗಳಲ್ಲಿ ಗೊಂದಲ ಮೂಡಿಸಿದೆ ಎಂದು ಹೇಳಿದ್ದಾರೆ. ಅರ್ನ್ಸ್ಟ್ ಮತ್ತು ಯಂಗ್ ಇಂಡಿಯಾದಲ್ಲಿ ಶೋಷಣೆಯ ಕೆಲಸದ ವಾತಾವರಣದ ಬಗ್ಗೆ ಮೃತ ಯುವತಿಯ ಕುಟುಂಬದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ.
ಪುಣೆ ಮಹಿಳೆ ಈ ಬಗ್ಗೆ ಇಮೇಲ್ ಮಾಡಿದ್ದು, ನನ್ನ ಮಗಳು ಹೇಗೆ ತೀವ್ರ ಕೆಲಸದ ಒತ್ತಡದಲ್ಲಿದ್ದಳು, ಅದು ಹೇಗೆ ಅವಳ ಆರೋಗ್ಯದ ಮೇಲೆ ಪರಿಣಾಮ ಬೀರಿತು ಮತ್ತು ಅಂತಿಮವಾಗಿ ಅವಳ ಸಾವಿಗೆ ಕಾರಣವಾಯಿತು ಎಂದು ವಿವರಿಸಿದ್ದರು. ತನ್ನ ಮಗಳ ಅಂತ್ಯಕ್ರಿಯೆಯಲ್ಲಿ ಆಕೆಯ ಕಂಪನಿಯಿಂದ ಯಾರೂ ಭಾಗವಹಿಸಲಿಲ್ಲ ಎಂದು ಅವರು ಉಲ್ಲೇಖಿಸಿದ್ದರು.
https://x.com/ShobhaBJP/status/1836621641301766357?