Ad

ಮುದುಕನ ವೇಷ ಧರಿಸಿ ಪ್ರಯಾಣಿಸುತ್ತಿದ್ದ 24ರ ಯುವಕ ಜೈಲುಪಾಲು

ನಕಲಿ ಪಾಸ್‌ಪೋರ್ಟ್‌ ಪ್ರಕರಣದಡಿಯಲ್ಲಿ ಯುವಕನೊಬ್ಬ ಜೈಲುಪಾಲಾಗಿರುವ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನವದೆಹಲಿ: ನಕಲಿ ಪಾಸ್‌ಪೋರ್ಟ್‌ ಪ್ರಕರಣದಡಿಯಲ್ಲಿ ಯುವಕನೊಬ್ಬ ಜೈಲುಪಾಲಾಗಿರುವ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Ad
300x250 2

ಕೆನಡಾಕ್ಕೆ ಪ್ರಯಾಣಿಸುತ್ತಿದ್ದ ಯುವಕನನ್ನು ಸಿಐಎಸ್ಎಫ್ ತಂಡ ಆತನ ಅನುಮಾನಾಸ್ಪದ ನಡೆಯ ಹಿನ್ನೆಲೆ ವಿಚಾರಣೆ ನಡೆಸಿ ಬಂಧಿಸಿದೆ. 24 ವರ್ಷದ ಗುರುಸೇವಕ್‌ ಸಿಂಗ್‌ ಬಂಧನಕ್ಕೊಳಗಾದ ಯುವಕ.

ಪ್ರಯಾಣಿಕ ಗುರು ಸೇವಕ್ ಸಿಂಗ್(24) ಗಡ್ಡ ಮತ್ತು ಕೂದಲಿಗೆ ಬಣ್ಣ ಹಚ್ಚಿ 67 ವರ್ಷದ ವ್ಯಕ್ತಿಯ ವೇಷ ಧರಿಸಿ ರಶ್ಮಿಂದರ್ ಸಿಂಗ್ ಸಹೋಟಾ ಎಂಬ ಹೆಸರಿನ ಪಾಸ್ ಪೋರ್ಟ್ ತೋರಿಸಿ ಮಂಗಳವಾರ ದೆಹಲಿಯಿಂದ ಹೊರಡುವ ಏರ್ ಕೆನಡಾ ವಿಮಾನ ಹತ್ತಿ ಕೆನಡಕ್ಕೆ ಪ್ರಯಾಣಿಸುವ ಯೋಜನೆ ಹಾಕಿದ್ದನು.

ಆದರೆ ಅವನ ಚಟುವಟಿಕೆಗಳು ಅನುಮಾನಾಸ್ಪದವೆಂದು ಕಂಡು ಬಂದ ಹಿನ್ನಲೆಯಲ್ಲಿ ಆತನನ್ನು ಮೊದಲು ಸಿಐಎಸ್ ಎಫ್ ಸಿಬ್ಬಂದಿ ಪರಿಶೀಲಿಸಿದರು. ವ್ಯಕ್ತಿಯ ನೋಟ, ಧ್ವನಿ ಮತ್ತು ಚರ್ಮದ ವಿನ್ಯಾಸವು ಪಾಸ್ ಪೋರ್ಟ್ ನಲ್ಲಿ ತಿಳಿಸಿದ ವಿವರಗಳಿಗೆ ಭಿನ್ನವಾಗಿತ್ತು.

ಸೂಕ್ಷ್ಮವಾಗಿ ನೋಡಿದರೆ ಆತನ ಗಡ್ಡ ಮತ್ತು ಕೂದಲಿಗೆ ಬಣ್ಣಹಚ್ಚಿದ್ದು, ವಯಸ್ಸಾದವರಂತೆ ಕಾಣಲು ಕನ್ನಡಕ ಧರಿಸಿದ್ದನು ಎಂಬುದನ್ನು ಅವರು ಗಮನಿಸಿದರು. ಹಾಗಾಗಿ ಅನುಮಾನಗೊಂಡು ಆತನನ್ನು ವಿಚಾರಿಸಿದಾಗ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಹಾಗೇ ಆತನ ಹೆಸರಿನ ಪಾಸ್ ಪೋರ್ಟ್ ಅವನ ಮೊಬೈಲ್ ನಲ್ಲಿತ್ತು ಎನ್ನಲಾಗಿದೆ.

ಈ ಪ್ರಕರಣವು ನಕಲಿ ಪಾಸ್ ಪೋರ್ಟ್ ಗೆ ಸಂಬಂಧಿಸಿದ್ದಾದ್ದರಿಂದ ಸಿಐಎಸ್ ಎಫ್ ಆತನನ್ನು ಬಂಧಿಸಿ ಕಾನೂನಿನ ಕ್ರಮದಂತೆ ಆತನನ್ನು‌ ಹಾಗೂ ಆತನ ವಸ್ತುಗಳೊಂದಿಗೆ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad