Ad

ಹಜ್‌ಯಾತ್ರೆಯಲ್ಲಿ 98 ಭಾರತೀಯರ ಸಾವು : ವಿದೇಶಾಂಗ ಇಲಾಖೆ

ಈ ವರ್ಷ, 175,000 ಭಾರತೀಯ ಯಾತ್ರಿಕರು ಇಲ್ಲಿಯವರೆಗೆ ಹಜ್‌ಗೆ ಭೇಟಿ ನೀಡಿದ್ದು ಆಪೈಕಿ 98 ಭಾರತೀಯ ಯಾತ್ರಾರ್ಥಿಗಳು ಹಜ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಹೊಸದಿಲ್ಲಿ: ಈ ವರ್ಷ, 175,000 ಭಾರತೀಯ ಯಾತ್ರಿಕರು ಇಲ್ಲಿಯವರೆಗೆ ಹಜ್‌ಗೆ ಭೇಟಿ ನೀಡಿದ್ದು ಆಪೈಕಿ 98 ಭಾರತೀಯ ಯಾತ್ರಾರ್ಥಿಗಳು ಹಜ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Ad
300x250 2

ಹಜ್ ಯಾತ್ರಿಗಳ ಸಾವಿನ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ ಹಜ್ ಯಾತ್ರಿಗಳ ಸಾವುಗಳು ನೈಸರ್ಗಿಕ ಅನಾರೋಗ್ಯ, ನೈಸರ್ಗಿಕ ಕಾರಣ, ದೀರ್ಘಕಾಲದ ಅನಾರೋಗ್ಯ ಮತ್ತು ವೃದ್ಧಾಪ್ಯದ ಕಾರಣದಿಂದಾಗಿ ಸಂಭವಿಸಿವೆ.

ಅರಾಫತ್ ದಿನದಂದು, ಆರು ಭಾರತೀಯರು ಸಾವನ್ನಪ್ಪಿದ್ದರು ಮತ್ತು ನಾಲ್ವರು ಭಾರತೀಯರು ಅಪಘಾತಗಳಿಂದ ಸಾವನ್ನಪ್ಪಿದ್ದರು. ಕಳೆದ ವರ್ಷ ಹಜ್ ಯಾತ್ರೆಯಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 187″ ಎಂದು ವಿವರ ನೀಡಿದರು

Ad
Ad
Nk Channel Final 21 09 2023
Ad