Ad

ಅಜ್ಜನ ಮನೆಯಿಂದ 90 ಲಕ್ಷ ಕದ್ದು ಮೊಮ್ಮಗಳು ಪರಾರಿ: ಪೊಲೀಸರ ವಶಕ್ಕೆ

ಅಜ್ಜನ ಮನೆಯಲ್ಲಿ ಮೊಮ್ಮಗಳೇ 90 ಲಕ್ಷ ರೂಪಾಯಿ ಕದ್ದು ಪರಾರಿಯಾಗಿರುವ ಘಟನೆ ರಾಜಸ್ಥಾನದ ಭಿಲ್ವಾಡ ಜಿಲ್ಲೆಯಲ್ಲಿ ನಡೆದಿದೆ.

ಜೈಪುರ: ಅಜ್ಜನ ಮನೆಯಲ್ಲಿ ಮೊಮ್ಮಗಳೇ 90 ಲಕ್ಷ ರೂಪಾಯಿ ಕದ್ದು ಪರಾರಿಯಾಗಿರುವ ಘಟನೆ ರಾಜಸ್ಥಾನದ ಭಿಲ್ವಾಡ ಜಿಲ್ಲೆಯಲ್ಲಿ ನಡೆದಿದೆ.

Ad
300x250 2

ಮೊಮ್ಮಗಳು ಪೂಜಾ ಚೌಧರಿ ಆರೋಪಿ, ಅಜ್ಜ ಬಕ್ಸೂ ಜಾಟ್ ಗೆ ಜಮೀನು ಮಾರಾಟ ಮಾಡಿ 90 ಲಕ್ಷ ರೂಪಾಯಿ ಆದಾಯ ಬಂದಿತ್ತು. ಇದೇ ಸಂದರ್ಭದಲ್ಲಿ ಅಜ್ಜನ ಮನೆಗೆ ಮೊಮ್ಮಗಳು ಪೂಜಾ ಚೌಧರಿ ಬಂದಿದ್ದಳು. ಅಜ್ಜನ ಮನೆಯಲ್ಲಿ 90 ಲಕ್ಷ ರೂಪಾಯಿ ಇರುವಾಗ ಪೂಜಾ ತನ್ನ ಸ್ನೇಹಿತರ ಸಹಾಯದಿಂದ ಹಣ ಕದ್ದು ಪರಾರಿಯಾಗಿದ್ದಳು.

ಮನೆಯಲ್ಲಿ ಅಜ್ಜ ಮಲಗಿದ್ದಾಗ ತಿಜೋರಿ ಕೀ ತೆಗೆದುಕೊಂಡ ಮೊಮ್ಮಗಳು ಬರೋಬ್ಬರಿ 90 ಲಕ್ಷ ರೂಪಾಯಿಯನ್ನು ಕದ್ದಿದ್ದಾಳೆ. ಕದ್ದ 90 ಲಕ್ಷದಲ್ಲಿ 1 ಲಕ್ಷ ರೂಪಾಯಿಯನ್ನು ಖಾಟೂ ಶ್ಯಾಮ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ನಂತರ ಒಂದೂವರೆ ಲಕ್ಷ ರೂಪಾಯಿ ಒಂದು ಕಾರು ಕೊಂಡುಕೊಂಡಿದ್ದಾರೆ. ಉಳಿದ ಹಣದಲ್ಲಿ ಮಜಾ ಮಾಡಲು ಹೋಗಿದ್ದಾಳೆ.

90 ಲಕ್ಷ ರೂಪಾಯಿ ಕಳೆದುಕೊಂಡ ಅಜ್ಜ ಬಕ್ಸೂ ಜಾಟ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರಿಗೆ ನಾಪತ್ತೆಯಾಗಿದ್ದ ಮೊಮ್ಮಗಳ ಮೇಲೆ ಅನುಮಾನ ಬಂದು ಹುಡುಕಿದಾಗ ಸತ್ಯ ಹೊರ ಬಿದ್ದಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಪೂಜಾ ಅಸಲಿ ಪೂರಾಣ ಬಯಲಾಗಿದ್ದು, ಮೊಮ್ಮಗಳ ಬಳಿ ಉಳಿದಿದ್ದ 82 ಲಕ್ಷ ರೂಪಾಯಿ ನಗದನ್ನು ಅಜ್ಜನಿಗೆ ವಾಪಸ್ ಕೊಡಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad