Ad

ತ್ರಿಪುರದಲ್ಲಿ 828 ವಿದ್ಯಾರ್ಥಿಗಳಲ್ಲಿ ಹೆಚ್​ಐವಿ ಪಾಸಿಟಿವ್: 47 ಮೃತ್ಯು

ಶಾಲಾ- ಕಾಲೇಜಿನ 828 ವಿದ್ಯಾರ್ಥಿಗಳಲ್ಲಿ ಹೆಚ್​ಐವಿ ಪಾಸಿಟಿವ್ ಕಾಣಿಸಿಕೊಂಡಿದ್ದು ಇದರಲ್ಲಿ 47 ವಿದ್ಯಾರ್ಥಿಗಳು​ ಸಾವನ್ನಪ್ಪಿರುವ ಘಟನೆ ಈಶಾನ್ಯ ರಾಜ್ಯವಾದ ತ್ರಿಪುರದಲ್ಲಿ ನಡೆದಿದೆ.

ಅಗರ್ತಲಾ: ಶಾಲಾ- ಕಾಲೇಜಿನ 828 ವಿದ್ಯಾರ್ಥಿಗಳಲ್ಲಿ ಹೆಚ್​ಐವಿ ಪಾಸಿಟಿವ್ ಕಾಣಿಸಿಕೊಂಡಿದ್ದು ಇದರಲ್ಲಿ 47 ವಿದ್ಯಾರ್ಥಿಗಳು​ ಸಾವನ್ನಪ್ಪಿರುವ ಘಟನೆ ಈಶಾನ್ಯ ರಾಜ್ಯವಾದ ತ್ರಿಪುರದಲ್ಲಿ ನಡೆದಿದೆ.

Ad
300x250 2

ನಮ್ಮ ನೋಂದಣಿಯಲ್ಲಿ ಒಟ್ಟು 828 ವಿದ್ಯಾರ್ಥಿಗಳ ಮಾಹಿತಿ ಇದ್ದು ಇವರಲ್ಲಿ ಹೆಚ್​ಐವಿ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿನ 47 ವಿದ್ಯಾರ್ಥಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ 572 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ತ್ರಿಪುರದ ಏಡ್ಸ್ ನಿಯಂತ್ರಣ ಸೊಸೈಟಿಯ ಜಂಟಿ ನಿರ್ದೇಶಕ ಭಟ್ಟಾಚಾರ್ಜಿ ತಿಳಿಸಿದ್ದಾರೆ.

ರಾಜ್ಯದ 220 ಶಾಲೆಗಳು, 24 ಕಾಲೇಜುಗಳು ಹಾಗೂ ಯುನಿರ್ವಸಿಟಿಯಲ್ಲಿ ಓದುವ ವಿದ್ಯಾರ್ಥಿಗಳು ಡ್ರಗ್ಸ್​ ಇಂಜೆಕ್ಷನ್​ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಈ ಹೆಚ್​ಐವಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಎಲ್ಲ ಶಾಲಾ-ಕಾಲೇಜುಗಳನ್ನು ನಾವು ಪತ್ತೆ ಮಾಡಿದ್ದು ಅಲ್ಲಿನ ಹಲವು ವಿದ್ಯಾರ್ಥಿಗಳು ಆ ಡ್ರಗ್​ಗೆ ಅಡಿಕ್ಟಿಡ್ ಆಗಿದ್ದಾರೆ. ನಾವು ರಾಜ್ಯಾದ್ಯಂತ ಒಟ್ಟು 164 ಆರೋಗ್ಯ ಕೇಂದ್ರಗಳಿಂದ ಈ ಡೇಟಾ ಸಂಗ್ರಹಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ತ್ರಿಪುರದಲ್ಲಿ 5,674 ಮಂದಿಗೆ ಹೆಚ್​​ಐವಿ ಪಾಸಿಟಿವ್‌ ಇದ್ದು ಇದರಲ್ಲಿ 4,570 ಮಂದಿ ಪುರುಷರು, 1,103 ಮಂದಿ ಮಹಿಳೆಯರು ಸೇರಿದ್ದಾರೆ. ಅಲ್ಲದೇ ಪ್ರತಿ ನಿತ್ಯ 5 ರಿಂದ 7 ಹೊಸ ಹೆಚ್‌ಐವಿ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad