ಉತ್ತರ ಪ್ರದೇಶ : ಪ್ರಯಾಗ್‌ರಾಜ್‌ನ ಗ್ಯಾರೇಜ್‌ನಲ್ಲಿದ್ದ ಕಾರಿನ ಬಾನೆಟ್‌ನೊಳಗೆ ಬೃಹತ್ ಹೆಬ್ಬಾವುವೊಂದು ಪತ್ತೆಯಾಗಿದೆ. ರಿಪೇರಿಗಾಗಿ ಗ್ಯಾರೇಜ್‌ನೊಳಗೆ ನಿಲ್ಲಿಸಿದ್ದ ಕಾರಿನ ಬಾನೆಟ್ ತೆರೆದಾಗ ಬೃಹತ್ ಹೆಬ್ಬಾವು ಕಂಡು ಮೆಕ್ಯಾನಿಕ್ ಬೆಚ್ಚಿಬಿದ್ದಿದ್ದಾನೆ. ಬಳಿಕ ಅರಣ್ಯ ಇಲಾಖೆಗೆ ಕರೆಮಾಡಿದ್ದು, ಅರಣ್ಯ ಅಧಿಕಾರಿಗಳು ಬಂದು ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಗ್‌ರಾಜ್‌ನ ಸಿವಿಲ್ ಲೈನ್ಸ್‌ನಲ್ಲಿರುವ ಹೋಟೆಲ್ ಅಜಯ್ ಇಂಟರ್‌ನ್ಯಾಶನಲ್ ಹೊರಗಿರುವ ಗ್ಯಾರೇಜ್‌ನಲ್ಲಿ ಈ ಘಟನೆ ನಡೆದಿದೆ.
ಹೆಬ್ಬಾವು ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಬಾನೆಟ್‌ನೊಳಗೆ ಬೆಚ್ಚನೆ ಕೂತಿದ್ದು, ಮೆಕ್ಯಾನಿಕ್ ಎಸ್‌ಯುವಿಯ ಬಾನೆಟ್ ತೆರೆದಾಗ 7 ಅಡಿಯ ಬೃಹತ್ ಹೆಬ್ಬಾವು ಕಂಡು ಬೆಚ್ಚಿಬಿದ್ದದ್ದಾನೆ. ಗ್ಯಾರೇಜ್ ಮಾಲೀಕರು ಕೂಡಲೇ 112ಕ್ಕೆ ಕರೆ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ತಂಡ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.
प्रयागराज : कार का बोनट खोलने पर निकला विशालकाय अजगर
➡गैराज में अजगर देखते ही लोगों में मची अफरा-तफरी
➡मौके पर पहुंची रेस्क्यू टीम ने अजगर को पकड़ा
➡अजय इंटरनेशनल के सामने स्थित गैराज का मामला.#Prayagraj pic.twitter.com/JaYobafFKk— भारत समाचार | Bharat Samachar (@bstvlive) September 14, 2024