ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಹತ್ತು ಅಭ್ಯರ್ಥಿಗಳನ್ನೊಳಗೊಂಡ 6ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿ ಕಥುವಾ ಕ್ಷೇತ್ರದಿಂದ ಭರತ್ ಭೂಷಣ್, ಸೋನಾವರಿ ಕ್ಷೇತ್ರದಿಂದ ಅಬ್ದುಲ್ ರಶೀದ್ ಖಾನ್, ಉಧಂಪುರ ಪೂರ್ವ ಕ್ಷೇತ್ರದಿಂದ ಆರ್.ಎಸ್ ಪಠಾನಿಯಾ ಮತ್ತು ಬಂಡಿಪೋರಾ ಕ್ಷೇತ್ರದಿಂದ ನಸೀರ್ ಅಹ್ಮದ್ ಲೋನ್ ಸ್ಪರ್ಧಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಅನಾವರಣಗೊಳಿಸಿದ್ದರು. ಇದಾದ ನಂತರ ಪಕ್ಷದಲ್ಲಿ ಈ ಬೆಳವಣಿಗೆಯಾಗಿದೆ ಎಂದು ಹೇಳಿದ್ದರು.
ಕಾಶ್ಮೀರಕ್ಕೆ ಭೇಟಿ ನಿಡಿದ್ದ ವೇಳೆ ಪಕ್ಷದ ಪ್ರಾಥಮಿಕ ಉದ್ದೇಶ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ತೊಡೆದುಹಾಕುವುದು. ಅಭಿವೃದ್ಧಿ, ಪ್ರಗತಿ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣವನ್ನು ಉತ್ತೇಜಿಸುವುದು ಎಂದು ಶಾ ಒತ್ತಿ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25, ಮತ್ತು ಅಕ್ಟೋಬರ್ 1 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.