ರಾಜಸ್ಥಾನ: ಮಸೀದಿಯೊಳಗೆ 5 ವರ್ಷಗಳ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ. ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ, ಬಾಲಕಿ ತನ್ನ ನಿವಾಸದ ಹೊರಗೆ ಆಟವಾಡುತ್ತಿದ್ದಾಗ ಮೌಲ್ವಿ ಅಸ್ಜದ್ ಮಸೀದಿಯೊಳಗೆ ಅತ್ಯಾಚಾರವೆಸಗಿ ಕ್ರೌರ್ಯ ಮೆರೆದಿದ್ದಾನೆ.
ಪೊಲೀಸರ ಪ್ರಕಾರ, ಆಕೆಯ ತಾಯಿ ಬಾಲಕಿಯನ್ನು ಹುಡುಕಿಕೊಂಡು ಅವರ ಮನೆಯ ಎದುರು ಇರುವ ಮಸೀದಿಯೊಳಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಎಚ್‌ಒ ರಾಜ್‌ಗಢ ರಾಮಜಿಲಾಲ್ ಮೀನಾ ತಿಳಿಸಿದ್ದಾರೆ.
Ad