ಶಬರಿಮಲೆ: ಅಯ್ಯಪ್ಪ ಸ್ವಾಮಿಯ ಭಕ್ತರು ಪ್ರತಿವರ್ಷ ಶ್ರದ್ಧಾಭಕ್ತಿ ಮೆರೆದು, ಶಬರಿಮಲೆಗೆ ಹೋಗಿ ಸ್ವಾಮಿಗೆ ಪೂಜೆ ಮಾಡಿಸಿಕೊಂಡು ಬರುತ್ತಾರೆ. ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಜನರು ಬರುತ್ತಾರೆ. 2024-25ನೇ ಸಾಲಿನಲ್ಲಿ ಸುಮಾರು 53 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ.
ಕಳೆದ ಸಾಲಿಗೆ ಹೋಲಿಕೆ ಮಾಡಿದರೆ, ಈ ಬಾರಿಯೇ 10 ಲಕ್ಷ ಹೆಚ್ಚಳ ಆಗಿದೆ. ಈ ಋತುವಿನಲ್ಲಿ ದೇವಸ್ವಂ ಮಂಡಳಿಗೆ 440 ಕೋಟಿ ರೂಪಾಯಿ ಭರ್ಜರಿ ಆದಾಯ ಕೂಡ ಹರಿದುಬಂದಿದೆ.
ಕಳೆದ ವರ್ಷಕ್ಕಿಂತ 110 ಕೋಟಿ ರೂಪಾಯಿ ಆದಾಯ ಕೂಡ ಹೆಚ್ಚಾಗಿದ್ದು, ಭಂಡಾರ ಕಾಣಿಕೆಯಾಗಿ ಈ ಬಾರಿ 17 ಕೋಟಿ ರೂಪಾಯಿ & ಪ್ರಸಾದ ಮಾರಾಟದಿಂದ 192 ಕೋಟಿ ರೂಪಾಯಿ ಲಭಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಹಾಗೂ ಇದರ ಜೊತೆಗೆ ಭಂಡಾರ ಕಾಣಿಕೆಯಾಗಿ ಇದೀಗ ಲಭಿಸಿದ 126 ಕೋಟಿ ರೂಪಾಯಿ ಬ್ಯಾಂಕ್‌ಗೆ ಹಸ್ತಾಂತರ ಮಾಡಲಾಗಿದೆ. ಈ ಮೂಲಕ ಆದಾಯ ಸಂಗ್ರಹದಲ್ಲಿ ಹೊಸ ದಾಖಲೆ ಇದೀಗ ನಿರ್ಮಾಣ ಆಗಿದೆ.