Ad

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ನಡುಗಿದ ಭೂಮಿ, 4.5 ತೀವ್ರತೆಯಲ್ಲಿ ಭೂಕಂಪ

ನಗರದ ಹಿಂಗೋಲಿಯಲ್ಲಿ ಇಂದು ಬೆಳಗ್ಗೆ ಭೂಕಂಪದ ಅನುಭವವಾಗಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.5 ಎಂದು ಅಳೆಯಲಾಗಿದೆ. ಇಂದು ಮುಂಜಾನೆ 7.14ಕ್ಕೆ ಈ ಭೂಕಂಪ ಸಂಭವಿಸಿದೆ.

ಮಹಾರಾಷ್ಟ್ರ: ನಗರದ ಹಿಂಗೋಲಿಯಲ್ಲಿ ಇಂದು ಬೆಳಗ್ಗೆ ಭೂಕಂಪದ ಅನುಭವವಾಗಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.5 ಎಂದು ಅಳೆಯಲಾಗಿದೆ. ಇಂದು ಮುಂಜಾನೆ 7.14ಕ್ಕೆ ಈ ಭೂಕಂಪ ಸಂಭವಿಸಿದೆ.

Ad
300x250 2

ನಗರದ ಪರ್ಭಾನಿ ಮತ್ತು ನಾಂದೇಡ್‌ನಲ್ಲಿಯೂ ಭೂಕಂಪನದ ಅನುಭವವಾಗಿದೆ.ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟವಾಗ್ಲಿಲ್ಲ.ಈ ಹಿಂದೆ ಮಾರ್ಚ್ 21 ರಂದು ಕೂಡ ಹಿಂಗೋಲಿಯಲ್ಲಿ ಭೂಕಂಪ ಸಂಭವಿಸಿತ್ತು. 10 ನಿಮಿಷಗಳ ಅವಧಿಯಲ್ಲಿ ಭೂಮಿ ಎರಡು ಬಾರಿ ಕಂಪಿಸಿತ್ತು.

ಬೆಳಗ್ಗೆ 6.08ಕ್ಕೆ ಮೊದಲ ಭೂಕಂಪನ ಸಂಭವಿಸಿದ್ದು, 6.19ಕ್ಕೆ ಎರಡನೇ ಕಂಪನದ ಅನುಭವವಾಗಿದೆ. ಮೊದಲ ಭೂಕಂಪದ ತೀವ್ರತೆ 4.5 ದಾಖಲಾಗಿದ್ದರೆ, ಎರಡನೇ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.6 ಎಂದು ಅಳೆಯಲಾಗಿದೆ. ಈ ವೇಳೆ ಮಲಗಿದ್ದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ.

Ad
Ad
Nk Channel Final 21 09 2023
Ad