Ad

300 ರೂ. ಮೌಲ್ಯದ ಕೃತಕ ಆಭರಣ, 6 ಕೋಟಿ ರೂಗೆ ಅಮೇರಿಕಾದ ಮಹಿಳೆಗೆ ಮಾರಾಟ

ಅಂಗಡಿ ಮಾಲೀಕನೊಬ್ಬ 300 ರೂ. ಮೌಲ್ಯದ ಕೃತಕ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆಗೆ ಅಮೇರಿಕಾದ ಮಹಿಳೆಗೆ ಮಾರಾಟ ಮಾಡಿ ವಂಚಿಸಿದ ಘಟನೆ ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ ನಲ್ಲಿ ನಡೆದಿದೆ.

ರಾಜಸ್ಥಾನ: ಅಂಗಡಿ ಮಾಲೀಕನೊಬ್ಬ 300 ರೂ. ಮೌಲ್ಯದ ಕೃತಕ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆಗೆ ಅಮೇರಿಕಾದ ಮಹಿಳೆಗೆ ಮಾರಾಟ ಮಾಡಿ ವಂಚಿಸಿದ ಘಟನೆ ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ ನಲ್ಲಿ ನಡೆದಿದೆ.

Ad
300x250 2

ಬಜಾರ್ ನಲ್ಲಿರುವ ಅಂಗಡಿಯೊಂದರಲ್ಲಿ ಅಮೇರಿಕಾದ ಮಹಿಳೆ ಚೆರಿಶ್ ಅವರು ಚಿನ್ನ ಖರೀದಿಸಿದ್ದಾರೆ. ಆಗ ಅಂಗಡಿಯ ಮಾಲೀಕ ಚಿನ್ನದ ಪಾಲಿಶ್ ಇರುವ 300ರೂ ಬೆಲೆಯ ಬೆಳ್ಳಿ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆ ಹೇಳಿ ಮಾರಾಟ ಮಾಡಿದ್ದಾನೆ.

ಮಹಿಳೆ ಈ ವರ್ಷ ಏಪ್ರಿಲ್ ನಲ್ಲಿ ಅಮೇರಿಕಾದಲ್ಲಿ ನಡೆದ ಪ್ರದರ್ಶನದಲ್ಲಿ ತಾನು ಜೈಪುರದಲ್ಲಿ ಖರೀದಿಸಿದ ಆಭರಣವನ್ನು ಪ್ರದರ್ಶಿಸಿದಾಗ ಅದು ನಕಲಿ ಎಂಬುದಾಗಿ ತಿಳಿದುಬಂದಿದೆ. ಆಗ ಮಹಿಳೆ ಭಾರತಕ್ಕೆ ಬಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಅಂಗಡಿ ಮಾಲೀಕ ಗೌರವ್ ಸೋನಿ ಎಂಬುದಾಗಿ ತಿಳಿದುಬಂದಿದೆ. ಈತ ತನ್ನ ಕೃತ್ಯವನ್ನು ಒಪ್ಪಿಕೊಳ್ಳದ ಕಾರಣ ಮಹಿಳೆ ಜೈಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿಗಳು ಮಹಿಳೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.

2022ರಲ್ಲಿ ಇನ್ ಸ್ಟಾಗ್ರಾಂನಲ್ಲಿ ಗೌರವ್ ಸೋನಿಯನ್ನು ಸಂಪರ್ಕಿಸಿದ ಮಹಿಳೆ ಕಳೆದ 2 ವರ್ಷಗಳಲ್ಲಿ ಈ ಕೃತಕ ಆಭರಣಗಳಿಗಾಗಿ 6 ಕೋಟಿ ರೂಪಾಯಿಗಳನ್ನು ಪಾವತಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿ ಇಬ್ಬರು ಪರಾರಿಯಾಗಿದ್ದಾರೆ. ಹಾಗಾಗಿ ಪೊಲೀಸರು ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅದಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ. ಹಾಗೇ ಆಭರಣಕ್ಕೆ ನಕಲಿ ಪ್ರಮಾಣಪತ್ರ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Ad
Ad
Nk Channel Final 21 09 2023
Ad