ಉತ್ತರ ಪ್ರದೇಶ: ಓರ್ವ ವ್ಯಕ್ತಿ ಆಸ್ಪತ್ರೆಯಿಂದ ತನ್ನ ಪತ್ನಿ ಹಾಗೂ ನವಜಾತ ಶಿಶುವನ್ನು ಬಿಡುಗಡೆ ಮಾಡಲು ಮೂರು ವರ್ಷದ ಮಗನನ್ನು ಮಾರಿದ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ.
ಆಸ್ಪತ್ರೆಯ ಬಿಲ್ ಕಟ್ಟಲು ಆತನ ಬಳಿ ಹಣ ಇರಲಿಲ್ಲ. ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದ ಕೆಲವರ ಸಲಹೆ ಮೇರೆಗೆ ಮಗುವನ್ನು ದಂಪತಿಗೆ ಮಾರಾಟ ಮಾಡಿದ್ದಾರೆ. ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆಯೇ ರಕ್ಷಣೆ ಮಾಡಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಕ್ಷಿಪ್ರಗತಿಯಲ್ಲಿ ಎಚ್ಚೆತ್ತುಕೊಂಡಿದ್ದಾರೆ. ಜೊತೆಗೆ ಮಗು ಪಡೆದ ದಂಪತಿ ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬರ್ವಾದ ನಿವಾಸಿ ಹರೀಶ್ ಪಟೇಲ್ ಎಂಬಾತ ತನ್ನ ಪತ್ನಿಯನ್ನು ಹೆರಿಗೆಗೆ ಎಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಇದು ಅವರಿಗೆ ಆರನೇ ಮಗುವಾಗಿತ್ತು.
ಮೂರು ವರ್ಷದ ಮಗನನ್ನು ನಕಲಿ ದತ್ತು ದಾಖಲೆಯಡಿ ಕೆಲವು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Ad