Bengaluru 22°C
Ad

ಶ್ರೀಲಂಕಾದಲ್ಲಿ ಅಕ್ರಮ ಮೀನುಗಾರಿಕೆ ಆರೋಪ: 18 ಭಾರತೀಯ ಮೀನುಗಾರರ ಬಂಧನ

Indian Arrested

ನವದೆಹಲಿ: ಶ್ರೀಲಂಕಾದಲ್ಲಿ ಅಕ್ರಮ ಮೀನುಗಾರಿಕೆ ಆರೋಪದ ಮೇಲೆ 18 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಮತ್ತು ಮೂರು ಮೀನುಗಾರಿಕಾ ಹಡಗುಗಳನ್ನು ಲಂಕಾ ನೌಕಪಡೆ ವಶಕ್ಕೆ ಪಡೆದುಕೊಂಡಿದೆ ಎಂದು ಮಾಧ್ಯಮ ವರದಿಯೊಂದು ಭಾನುವಾರ ತಿಳಿಸಿದೆ.

Ad
300x250 2

ಶನಿವಾರ ರಾತ್ರಿ ಡೆಲ್ಫ್ಟ್ ದ್ವೀಪಗಳ ಬಳಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಉತ್ತರ ಸಮುದ್ರದಿಂದ ಮೀನುಗಾರರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಂಧಿತ ಮೀನುಗಾರರನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಕಂಕೆಸಂತುರೈ ಮೀನುಗಾರಿಕಾ ಬಂದರಿಗೆ ಕರೆದೊಯ್ಯಲಾಗುವುದು ಎಂದು ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಗಯಾನ್ ವಿಕ್ರಮಸೂರ್ಯ ತಿಳಿಸಿದ್ದಾರೆ. ಕಳೆದ ವಾರ, ದ್ವೀಪ ರಾಷ್ಟ್ರದ ನೀರಿನಲ್ಲಿ ಬೇಟೆಯಾಡಿದ ಆರೋಪದ ಮೇಲೆ ನಾಲ್ವರು ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಅವರ ಟ್ರಾಲರ್ ನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿತ್ತು.

ಇದಕ್ಕೂ ಮುನ್ನಾ ಶ್ರೀಲಂಕಾಕ್ಕೆ ಸೇರಿದ ಜಲಮಾರ್ಗದಲ್ಲಿ ಅಕ್ರಮ ಮೀನುಗಾರಿಕೆ ಆರೋಪದ ಮೇರೆಗೆ 180 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಅವರ 25 ಟ್ರಾಲರ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಕಳೆದ ವರ್ಷ ಸುಮಾರು 240 ರಿಂದ 245 ಮಂದಿಯನ್ನು ಬಂಧಿಸಲಾಗಿತ್ತು ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad